ಶೇ. 39 ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ ಎಂದು ರಾಹುಲ್ ಟ್ವೀಟ್

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ 8ನೇ ಪ್ರಶ್ನೆಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಳಿದ್ದು, ಗುಜರಾತ್​ನ ಆರೋಗ್ಯದ ಪರಿಸ್ಥಿತಿ ಕುರಿತು ಟ್ವೀಟ್ ಮಾಡಿದ್ದಾರೆ. ಶೇ. 39ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಸಾವಿರದಲ್ಲಿ 33 ನವಜಾತ ಶಿಶುಗಳು ಬಲಿಯಾಗುತ್ತಿವೆ. ಚಿಕಿತ್ಸೆ ಹೆಚ್ಚುತ್ತಿದೆ, ವೈದ್ಯರ ಅಭಾವ ಎದುರಾಗಿದೆ ಎಂದು ಅವರು ಗುಜರಾತ್​​ನ ಆರೋಗ್ಯ ಪರಿಸ್ಥಿತಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಭುಜ್​​ ಭೂಕಂಪ ಪುನರ್ವಸತಿ ವೇಳೆ ಆಸ್ಪತ್ರೆಯನ್ನು ಖಾಸಗಿಯವರು ಅಭಿವೃದ್ಧಿಪಡಿಸಲು ನೀಡಿರುವುದನ್ನು ಪ್ರಶ್ನಿಸಿರುವ ಅವರು, ಭುಜ್​​ನಲ್ಲಿ ಮಿತ್ರನಿಗೆ 99 ವರ್ಷಗಳಿಗೆ ಸರ್ಕಾರಿ ಆಸ್ಪತ್ರೆ ನೀಡಿದ್ದೀರಿ. ಇದೇ ನಿಮ್ಮ ಆರೋಗ್ಯ ಯೋಜನೆಯ ಅದ್ಭುತವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

0

Leave a Reply

Your email address will not be published. Required fields are marked *