ಮಹಿಳಾ ಟೆನಿಸ್ ಲೋಕಕ್ಕೆ ಹೊಸ ಸಾಮ್ರಾಜ್ಞೆ…

ವಿಶ್ವ ಮಹಿಳಾ ಟೆನಿಸ್ ಲೋಕದ ನಂ1 ಸ್ಥಾನವನ್ನ ಹೊಸ ಒಡತಿ ಅಲಂಕರಿಸಿದ್ದಾಳೆ. ಯುಎಸ್​ ಓಪನ್ ಮುಗಿದ ಬಳಿಕ ಡಬ್ಲ್ಯೂಟಿಎ ರ್ಯಾಂಕಿಂಗ್​ ಪ್ರಕಟಗೊಂಡಿದ್ದು ಉದಯೋನ್ಮುಕ ತಾರೆಯೊಬ್ಬಳು ನಂ1 ಪಟ್ಟಕ್ಕೇರಿದ್ದಾಳೆ.. ಟೆನಿಸ್​ ಲೋಕಕ್ಕೆ ಹೊಸ ಸಾಮ್ರಾಜ್ಞೆ ಆಗಮಿಸಿದ್ದಾಳೆ.. ಅದು ಕೂಡ ಸ್ಪೇನ್​ ನಿಂದಲೇ.. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಯುಎಸ್​ ಓಪನ್​ ಬಳಿಕ ಪ್ರಕಟಗೊಂಡ ಡಬ್ಲ್ಯೂಟಿಎ ರ್ಯಾಂಕಿಂಗ್​ನಲ್ಲಿ ಸ್ಪೇನ್​​ ಉದಯೋನ್ಮುಕ ತಾರೆ ಗಾರ್ಬೈನ್​ ಮುಗುರುಜಾ ನಂ1 ಪಟ್ಟ ಅಲಂಕರಿಸಿದ್ದಾಳೆ.

ಕಳೆದ ಯುಎಸ್​​ ಓಪನ್​​ನ ಪ್ರಿ ಕ್ವಾರ್ಟರ್​ ಫೈನಲ್​ನಲ್ಲಿ ಮುಗುರುಜಾ ಜೆಕ್​ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ ನಿರಾಸೆ ಅನುಭವಿಸಿದ್ರು. ಆದ್ರೂ ನೂತನ ರ್ಯಾಂಕಿಂಗ್​ ಪಟ್ಟಿಯಲ್ಲಿ 6030 ಅಂಕಗಳನ್ನ ಸಂಪಾದಿಸುವ ಮೂಲಕ ನಂ1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜೆಕ್​ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೊವಾರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.ಇನ್ನು ವಿಶೇಷ ಏನಂದ್ರೆ ಸ್ಪೇನ್​ನ ​ ಗಾರ್ಬೈನ್​ ಮುಗುರುಜಾ ನಂ1 ಪಟ್ಟಕ್ಕೇರುತ್ತಿದ್ದಂತೆ ಎಲ್ಲರ ಆಕರ್ಷಣೆಗೆ ಕಾರಣರಾದ್ರು. ಯಾಕಂದ್ರೆ ಪುರುಷರ ರ್ಯಾಂಕಿಂಗ್ ಹಾಗೂ ಮಹಿಳಾ ಟೆನಿಸ್​ ರ್ಯಾಕಿಂಗ್​​ನಲ್ಲಿ ಸ್ಪೇನ್​ ಆಟಗಾರರೇ ಪ್ರಾಬಲ್ಯ ಮೆರೆದಂತಾಗಿದೆ. ಈ ಮೊದಲು ಯುಎಸ್​​ ಓಪನ್​ ಮೂರನೇ ಬಾರಿಗೆ ಮುಡಿಗೇರಿಸಿಕೊಂಡ ಸ್ಪೇನ್​ ರಾಫೆಲ್ ನಡಾಲ್​ ವಿಶ್ವದ ನಂ1 ಸ್ಥಾನವನ್ನ ಮರಳಿ ಪಡೆದಿದ್ರು. ಈಗ ಮುಗುರುಜಾ ಮಹಿಳಾ ಸಿಂಗಲ್ಸ್ ರ್ಯಾಂಕಿಂಗ್​​ನಲ್ಲಿ ನಂ1 ಪಟ್ಟಕ್ಕೇರಿದ್ದಾರೆ. ಹೀಗಾಗಿ ಒಂದೇ ದೇಶದ ಇಬ್ಬರು ಆಟಗಾರರು ಟೆನಿಸ್​​ ಲೋಕದಲ್ಲಿ ಅಧಿಪತ್ಯ ಸಾಧಿಸಿದ್ದಾರೆ.

ಈ ಹಿಂದೆ 2003ರಲ್ಲಿ ಈ ರೀತಿಯಾಗಿ ಒಂದೇ ದೇಶದ ಇಬ್ಬರು ಸ್ಟಾರ್​ಗಳು ನಂ1 ಪಟ್ಟಕ್ಕೇರಿದ್ದ ವಿಶೇಷ ಸಂದರ್ಭ ಕಂಡು ಬಂದಿತ್ತು. ಅಮೆರಿಕಾದ ಸ್ಟಾರ್ ಟೆನಿಸ್​ ಪ್ಲೇಯರ್​ ಆ್ಯಂಡ್ರೆ ಅಗಸಿ ಹಾಗೂ ಸೆರೆನಾ ವಿಲಿಯಮ್ಸ್​ ಕ್ರಮವಾಗಿ ಪುರುಷರ ಹಾಗೂ ಮಹಿಳಾ ಸಿಂಗಲ್ಸ್​​​ನಲ್ಲಿ ಅಗ್ರ ಕ್ರಮಾಂಕರಾಗಿ ಗುರುತಿಸಿಕೊಂಡಿದ್ರು.. ಅದಾದ 14 ವರ್ಷಗಳ ಬಳಿಕ ಒಂದೇ ದೇಶದ ಇಬ್ಬರು ಆಟಗಾರರು ಈ ಸಾಧನೆ ಮಾಡಿದ್ದಾರೆ. ಇಷ್ಟಲ್ಲದೆ ಮುಗುರುಜಾ ನಂ1 ಪಟ್ಟಕ್ಕೇರಿದ ವಿಶ್ವದ 24ನೇ ಹಾಗೂ ಸ್ಪೇನ್​ನ 2ನೇ ಆಟಗಾರ್ತಿಯಾಗಿ ಸಾಧನೆ ಮೆರೆದಿದ್ದಾರೆ. ಹೀಗೆ ನಂ1 ಪಟ್ಟಕ್ಕೇರಿದ ಖುಷಿಯನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿರುವ ಮುಗುರುಜಾ, ನಡಾಲ್​ರೊಂದಿಗೆ ಫೋಟೋವನ್ನ ಪೋಸ್ಟ್ ಮಾಡಿದ್ದು.. ರೋಲ್​ ಮಾಡೆಲ್​​​ರೊಂದಿಗೆ ಈ ಖುಷಿಯನ್ನ ಹಂಚಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದಾರೆ. ಈ ಮೂಲಕ ವಿಶ್ವ ಟೆನಿಸ್​ ಲೋಕಕ್ಕೆ ನಂ1 ಪಟ್ಟವನ್ನ ಹೊಸ ಆಟಗಾರ್ತಿ ಅಲಂಕರಿಸಿದಂತಾಗಿದೆ.
ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *