ಅವ್ಯವಸ್ಥೆಯ ಆಗರ ಮೆಗ್ಗಾನ್​ ಆಸ್ಪತ್ರೆ….

ವೃದ್ಧೆಯೊಬ್ಬಳು ತನ್ನ ಗಂಡನನ್ನು ಎಕ್ಸ್ ರೇ ತೆಗೆಯಿಸಲು ವೀಲ್ ಚೇರ್ ಇಲ್ಲದೆ ನೆಲದಲ್ಲೆ ಎಳೆದು ಕೊಂಡು ಹೋದ ಘಟನೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳ್ಕೆರೆ ತಾಲೂಕಿನ ಫಾಮೀದಾ ಎಂಬ ವೃದ್ದೆ ತನ್ನ ಪತಿ ಅಮೀರ್ ಸಾಬ್ ನನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ‌್ದರು. ಈ ವೇಳೆ ವೈದ್ಯರು ಅಮೀರ್ ಸಾಬ್ ರಿಗೆ ಎಕ್ಸ್ ರೇ ತೆಗೆಯಿಸಲು ಚೀಟಿ ಬರೆಯಿಸಿ ಕಳುಹಿಸಿದ್ದಾರೆ. ವೃದ್ದೆ ಫಾಮಿದಾ ತನ್ನ ಗಂಡನನ್ನು ಎಕ್ಸ್ ರೇ ರೂಂ ಗೆ ಕರೆದು ಕೊಂಡು ಹೋಗಲು ವೀಲ್​ ಚೇರ್ ಕಾಣದೆ ಇದ್ದಾಗ ರೂಂನಿಂದ ಲಿಫ್ಟ್ ತನಕ ನೆಲದ ಮೇಲೆ ಎಳೆದು ಕೊಂಡು ಹೋಗಿದ್ದಾರೆ.

1+

Leave a Reply

Your email address will not be published. Required fields are marked *