25 ಸಾವಿರ ಸಾಲ ತೀರಿಸಲಾಗುವುದು: ರಿಲಯನ್ಸ್ ಕಮ್ಯುನಿಕೇಷನ್ಸ್

ನವದೆಹಲಿ: ಸೆಪ್ಟಂಬರ್ 30ರ ಒಳಗೆ 25,000 ಕೋಟಿ ರೂ. ಸಾಲವನ್ನು ತೀರಿಸುವುದಾಗಿ ಸಾಲಗಾರರಿಗೆ ರಿಲಯನ್ಸ್​​ ಕಮ್ಯುನಿಕೇಷನ್ಸ್​​ ಭರವಸೆ ನೀಡಿದೆ. ಎರಡು ವ್ಯಾಪಾರ ಒಪ್ಪಂದಗಳ ಮೂಲಕ ಈ ಹಣವನ್ನು ಪಡೆಯುವುದಾಗಿ ಕೂಡ ಕಂಪನಿ ಹೇಳಿದೆ. ಈ ತಿಂಗಳ ಮಾರ್ಚ್​​ನಲ್ಲಿ ರಿಲಯನ್ಸ್​​ ಕಮ್ಯುನಿಕೇಷನ್ಸ್​​ನ ಸಾಲದ ಮೊತ್ತ 44,345.30 ಕೋಟಿ ರೂ. ಇತ್ತು. ಸದ್ಯಕ್ಕೆ 10 ಸ್ಥಳೀಯ ಬ್ಯಾಂಕ್​ಗಳಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಬಾಕಿ ಉಳಿಸಿಕೊಂಡಿದೆ. ಆದರೆ, ಈ ಪೈಕಿ ಗಣನೀಯ ಪ್ರಮಾಣದ ಸಾಲವನ್ನು ತೀರಿಸುವುದಾಗಿ ರಿಲಯನ್ಸ್ ಹೇಳಿಕೊಂಡಿದೆ.

0

Leave a Reply

Your email address will not be published. Required fields are marked *