ಅತ್ಯಾಚಾರ, ವಿಚ್ಛೇದನಗಳಿಗೆ ಪಾಶ್ಚಾತ್ಯ ಸಂಸ್ಕೃತಿ ಕಾರಣ: ಆರ್​​ಎಸ್​​​ಎಸ್​​ ಮುಖಂಡ

ಮುಂಬೈ: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ತ್ರಿವಳಿ ತಲಾಖ್​ಗಳಿಗೆ ಪಾಶ್ಚಾತ್ಯ ಸಂಸ್ಕೃತಿಯೇ ಕಾರಣ ಎಂದು ಆರ್​ಎಸ್​​ಎಸ್​ ಮುಖಂಡ ಇಂದ್ರೇಶ್ ಕುಮಾರ್​​ ಅಭಿಪ್ರಾಯಪಟ್ಟಿದ್ದಾರೆ. ಪ್ರೀತಿ ಪರಿಶುದ್ಧವಾದುದು. ಆದರೆ, ಪಾಶ್ಚಾತ್ಯ ಸಂಸ್ಕೃತಿ ಇದನ್ನು ಮನೋವಿಕಾರವನ್ನಾಗಿ ಬದಲಾಯಿಸಿದೆ. ಇನ್ನು ಇದು ವ್ಯವಹಾರವಾಗಿ ಕೂಡ ಬದಲಾಗಿದೆ. ಅತ್ಯಾಚಾರ, ವಿಚ್ಛೇದನಗಳಿಗೆ ಪಾಶ್ಚಾತ್ಯ ಸಂಸ್ಕೃತಿಯೇ ಕಾರಣ. ಜನ ಈಗ ವ್ಯಾಲೆಂಟೈನ್ಸ್ ದಿನದಂದು ಮುಕ್ತವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದಾಗಿ ತ್ರಿವಳಿ ತಲಾಖ್​ಗಳು, ಮನೆಗಳಲ್ಲಿ ದೈಹಿಕ ಹಿಂಸೆ, ಭ್ರೂಣ ಹತ್ಯೆಗಳ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆರ್​​ಎಸ್​ಎಸ್​ ಸ್ವಯಂ ಸೇವಕರ ತರಬೇತಿಗೆ ಆಗಮಿಸಿದ್ದ ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರೇಮ ಪರಿಶುದ್ಧವಾದುದು, ಆದರೆ, ಭಾರತದಲ್ಲಿ ಅದು ವಿಷವಾಗಿ ಪರಿವರ್ತನೆಯಾಗಿದೆ ಎಂದಿದ್ದಾರೆ. ಆದರೆ, ಪಾಶ್ಚಾತ್ಯ ಸಂಸ್ಕೃತಿ ಪ್ರೀತಿಯನ್ನೂ ವಾಣಿಜ್ಯೀಕರಿಸಿದೆ ಮದಕ್ಕಾಗಿ ವ್ಯಾಲೆಂಟೈನ್ಸ್​​ ಡೇಯನ್ನು ಹುಟ್ಟುಹಾಕಲಾಗಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಅವರು ಗೋ ಮಾಂಸ ಸೇವಿಸುವವರು ದೇಶವನ್ನು ತಲೆತಗ್ಗಿಸುವಂತೆ ಮಾಡುತ್ತಿದ್ದಾರೆ. ಗೋ ಮಾಂಸ ಸೇವನೆ ಅಮಾನವೀಯ ಎಂದು ಅಭಿಪ್ರಾಯಪಟ್ಟಿದ್ದರು. 121 ಕೋಟಿ ಜನಂಸಖ್ಯೆ ಇರುವ ಭಾರತದಲ್ಲಿ ಕೆಲವೇ ಕೆಲವರು ಗೋ ಮಾಂಸ ಮೇಳವನ್ನು ಆಯೋಜಿಸುತ್ತಿದ್ದಾರೆ. ಅವರು ದೇಶದ ಪ್ರತಿನಿಧಿಗಳಲ್ಲ. ಗೋ ಮಾಂಸ ಸೇವನೆ ಮೇಳಗಳನ್ನು ಆಯೋಜಿಸುವವರು ಮತ್ತು ಅವುಗಳನ್ನು ಬೆಂಬಲಿಸುವವರು ಕೆಡುಕು ಮನೋಧರ್ಮದವರು. ಅಂಥವರು ತಮ್ಮ ಮಾರ್ಗವನ್ನು ಬದಲಿಸಿಕೊಳ್ಳಬೇಕು ಎಂದು ಕೂಡ ಅವರು ಸಲಹೆ ನೀಡಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *