ಕವಿ ವೀರಣ್ಣ ಮಡಿವಾಳರಿಂದ ಸುಸಜ್ಜಿತವಾದ ಸರ್ಕಾರಿ ಶಾಲೆ

ನಮ್ಮ ಶಾಲೆಯ ಹೊಸ ವರುಷದ ಹೊಸ ಪುಟದಲ್ಲಿ ನಾವು ಅತ್ಯುತ್ತಮವಾದುದನ್ನೇ ಬರೆದೆವು

ಹೊಸ ವರುಷದ ಹೊಸ ದಿನ ನಮ್ಮ ಶಾಲೆಗೆ ಮತ್ತೊಂದು ಗರಿಮೆ ಮೂಡಿದ ದಿನ. ಸಮತೆಯ ಕನಸಿಗೆ ನಾವು ಈಗ ಮತ್ತಷ್ಟು ಹತ್ತಿರ. ಬರೀ ಪದವಾಗಿ, ಕವಿತೆಯಾಗಿ ಉಳಿಯುತ್ತಿದ್ದ ಕನಸಿಂದು ಕಣ್ಣಮುಂದೆ ಬಹುಸುಂದರ ವಾಸ್ತವವಾಗಿ ಆವರಿಸಿದೆ. ಹೇಗೆ ಅಂತೀರಾ?

ಹೌದು. ನಮ್ಮ ಶಾಲೆಯೀಗ ಮತ್ತಷ್ಟು ಸುಂದರ, ಸಮೃದ್ಧ ಮತ್ತು ಸಂಪನ್ಮೂಲ ಭರಿತ. ನಮ್ಮ ಮಕ್ಕಳಿಗೂ ಈಗ ಕುಳಿತುಕೊಳ್ಳಲು ಬಣ್ಣಬಣ್ಣದ ಕುರ್ಚಿಗಳು, ಟೇಬಲ್​​ಗಳು, ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಲ್ಲದ ಸವಲತ್ತುಗಳು ನಮ್ಮ ಮಕ್ಕಳಿಗೆ ಸಿಕ್ಕಿವೆ.

ಹೊಸ ವರುಷದ ಹೊಸ ದಿನ ಶಾಲೆಗೆ ಈ ಎಲ್ಲ ಪೀಠೋಪಕರಣ ಬಂದ ಕ್ಷಣ ನಮ್ಮ ಮಕ್ಕಳ ಕುಣಿತ ಅವರ ನಗು ಸಂತಸ ಸಂಭ್ರಮ ನಿಜಕ್ಕೂ ಮರೆಯಲಾಗದ್ದು. ನನ್ನ ಬದುಕಿನ ಬಗ್ಗೆ ನನಗೆ ಪಶ್ಚಾತ್ತಾಪ ಇಲ್ಲವೆಂದರೆ ಅದಕ್ಕೆ ಮುಖ್ಯ ಕಾರಣವೆಂದರೆ ನನ್ನ ಮಕ್ಕಳ ಈ ಸಂಭ್ರಮವೇ ಕಾರಣ.

ನಮ್ಮ ಮಕ್ಕಳ ಈ ಸಂಭ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಜಿ ಸಿದ್ಧರಾಮಯ್ಯನವರೇ ಮುಖ್ಯ ಕಾರಣ‌. ಗಡಿನಾಡಿನ ನಮ್ಮ ಕನ್ನಡ ಸರ್ಕಾರಿ ಶಾಲೆಗೆ ಅವರ ಪ್ರೀತಿಯನ್ನ ಪಡೆದ ಧನ್ಯತೆ ನಮ್ಮದು. ನಮ್ಮ ಶಾಲೆಗೆ ಅನುದಾನ ಮಂಜೂರು ಮಾಡಿ ಸರ್ಕಾರಿ ಕನ್ನಡ ಶಾಲೆಯೊಂದರ ಹೊಸ ಬೆಳವಣಿಗೆಗೆ ಸಹಕಾರ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾವು ಪ್ರೀತಿಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತೇವೆ.

ನಮ್ಮ ಶಾಲೆ ಈ ರೀತಿ ಹೊಸ ರೂಪ ಪಡೆಯಲು ನಮ್ಮ ಕನಸಿಗೆ ಜೊತೆಯಾದ ಗೆಳೆಯ ಎಸ್ ಮಂಜುನಾಥರ ಪ್ರೀತಿಯನ್ನ ನೆನೆಯುವೆ. ಗೆಲುವು ನಮ್ಮದು ಗೆಲುವು ನಮ್ಮದು ಎಂದಿಗೂ ಎಂದೆಂದಿಗೂ ಗೆಲುವು ನಮ್ಮದು.

ಸರಕಾರಿ ಶಾಲೆ ನಮ್ಮ ಹೆಮ್ಮೆ.

ಈ ಪೋಸ್ಟನ್ನ ಶೇರ್ ಮಾಡುವುದು, ಹಂಚಿಕೊಳ್ಳುವುದೂ ಅಭಿಪ್ರಾಯ ವ್ಯಕ್ತಪಡಿಸುವುದೂ ಸಹ ಕನ್ನಡ ಪ್ರೀತಿಯೇ ಎಂದು ಹೇಳಬೇಕೆ?

ತಾವೂ ನಮ್ಮ ಶಾಲೆಯ ಬೆಳವಣಿಗೆಯ ಜೊತೆ ನಿಲ್ಲಬಯಸುವಿರಾದರೆ .

– ವೀರಣ್ಣ ತಿಪ್ಪಣ್ಣ ಮಡಿವಾಳರ

0

Leave a Reply

Your email address will not be published. Required fields are marked *