ವಾಗ್ಮೊರೆ ವಿಚಾರಣೆ ತೀವ್ರಗೊಳಿಸಿದ ಎಸ್ಐಟಿ…

ಗೌರಿ ಲಂಕೇಶ್ ಹತ್ಯೆ ಕೇಸ್ ವಿಚಾರಣೆ ಮಹತ್ವದ ಘಟ್ಟ ತಲುಪಿದೆ. ನಿನ್ನೆ ಬಂಧನವಾಗಿದ್ದ ಪರಶುರಾಮ್ ವಾಗ್ಮೊರೆ ವಿಚಾರಣೆ ತೀವ್ರಗೊಂಡಿದ್ದು, ಗೌರಿ ಲಂಕೇಶ್ ಹತ್ಯೆಯ ಕುರಿತು ಹಲವು ಸುಳಿವು ಸಿಕ್ಕಿದೆ. ಅದು ಎನು ಅನ್ನೊ ಡೀಟೆಲ್ಸ್ ಇಲ್ಲಿದೆ ನೋಡಿ…

ಸಿಂದಗಿಯಲ್ಲಿ ಬಂಧನವಾಗಿದ್ದ ಶಂಕಿತ ಗೌರಿ ಲಂಕೇಶ್ ಹತ್ಯೆಯ ಶೂಟರ್ ಎನ್ನಲಾದ ಪರಶುರಾಮ್ ವಾಗ್ಮೊರೆ ತನಿಖೆ ತೀವ್ರಗೊಂಡಿದೆ. ಆರೋಪಿಯು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಹಲವು ಸುಳಿವು ಸಿಕ್ಕಿದೆ. ವಿಧಿ ವಿಜ್ನಾನ ಪ್ರಯೋಗಾಲಯದ ತಜ್ಞರ ತಂಡ ಮಾಡಿಕೊಟ್ಟ ರೇಖಾ ಚಿತ್ರದಂತೆ ಆರೋಪಿಯು 5.2 ಅಡಿಯಿದ್ದು, ಗೌರಿ ಹತ್ಯೆ ಮಾಡಿ ಹೋಗಿರುವ ಸಿಸಿಟಿವಿ ದ್ರಶ್ಯಾವಳಿಯಲ್ಲಿರೋ ವ್ಯಕ್ತಿಗೆ ಹೊಲಿಕೆಯಿದೆ. ಹಾಗೇ ತನಿಖೆ ವೇಳೆ ಕೆಲವು ವಿಚಾರಗಳ ಕುರಿತು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ….

ಎಸ್ ಐ ಟಿ ತನಿಖೆ ಚುರುಕುಗೊಂಡಿದ್ದು, ತನಿಖೆ ವೇಳೆ ಸಾಹಿತಿ ಭಗವಾನ್ ಹತ್ಯೆಗೂ ಪ್ಲಾನ್ ರೂಪಿಸಿದ್ದ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ವಿಧಾನಸಭೆ ಚುನಾವಣೆಯ ಹೊತ್ತಿಗೆ ಕೊಲೆ ಮಾಡುವ ಸಂಚನ್ನು ರೂಪಿಸಿದ್ದು, ಇದೇ ವೇಳೆಯಲ್ಲಿ ಮಾಸ್ಟರ್ ಮೈಂಡ್ ನವೀನ್ ಪೊಲೀಸರ ಬಲೆಗೆ ಬಿದ್ದ ಕಾರಣಕ್ಕೆ ಈ ಸಂಚು ವಿಫಲವಾಗಿತ್ತು ಎನ್ನಲಾಗಿದೆ…

ತನಿಖೆಯ ದಾರಿ ತಪ್ಪಿಸಲು ಆರೋಪಿಗಳು ಯತ್ನಿಸುತ್ತಿದ್ದು, ತನಿಖಾಧಿಕಾರಿಗಳ ಮೇಲೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಕೊಡಲಾಗುತ್ತಿದೆ ಅಂತ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿಯಿದೆ. ತನಿಖೆಯ ವೇಳೆ ಎನು ಬಾಯ್ಬಿಡದ ಹಿನ್ನಲೆ ಮಂಪರು ಪರೀಕ್ಷೆ ನಡೆಸಲು ತನಿಖಾಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ..ಹಾಗೇ ನವೀನ್ ಕುಮಾರ್ ಗೆ ಜಾಮೀನು ನೀಡುವಂತೆ ವಕಿಲರು ಅರ್ಜಿಯನ್ನ ಸಲ್ಲಿಸಿದ್ದು ಮುಂದೆನಾಗುತ್ತೊ ಕಾದುನೋಡಬೇಕಿದೆ…

0

Leave a Reply

Your email address will not be published. Required fields are marked *