ಇಂಗ್ಲೆಂಡ್ ಬ್ಯೂಟಿಗೆ ವಿರಾಟ್ ಕೊಟ್ಟ ಗಿಫ್ಟ್ ಏನು ಗೊತ್ತಾ..?

ಟೀಮ್ ಇಂಡಿಯಾದ ನಾಯಕ, ರನ್ ಮಷೀನ್, ಡೆಲ್ಲಿ ಡ್ಯಾಶರ್, ದಾಖಲೆಗಳ ವೀರ ವಿರಾಟ್ ಕೊಹ್ಲಿಗೆ ಫಿದಾ ಆಗದವರೇ ಇಲ್ಲ. ಕೊಹ್ಲಿ ನೋಡೋಕೆ ಮುಗಿಬೀಳೋ ಜನರಿಗೇನು ಕಡಿಮೆಯಿಲ್ಲ. ಅಂತ್ರದಲ್ಲಿ ಇಂಗ್ಲೆಂಡ್​ನ ಕ್ರಿಕೆಟರ್​ವೊಬ್ಳು ಕೂಡ ವಿರಾಟ್​ಗೆ ಮನಸೋತಿದ್ದಾಳೆ. ಅಲ್ದೇ, ಕೊಹ್ಲಿಯಿಂದ ಗಿಫ್ಟ್​ವೊಂದನ್ನ ಪಡೆದಿದ್ದಾಳೆ. ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಕೇಳಿ ಬರ್ತಿರೋ ಹೆಸರು ಅದೊಂದೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ದಾಖಲೆ ಮೇಲೆ ದಾಖಲೆ ಬರೆಯುತ್ತಿರೋ ಈ ರನ್ ಮಷೀನ್​ಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳ ಬಳಗವಿದೆ. ಅದ್ರಲ್ಲೂ ವಿರಾಟ್ ಕೊಹ್ಲಿಯಂದ್ರೆ, ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಫಾಲೋವರ್ಸ್​ ಇದ್ದಾರೆ.

ಟೀಮ್ ಇಂಡಿಯಾ ನಾಯಕನಾಗಿರೋ ವಿರಾಟ್ ಕೊಹ್ಲಿ ಅಂದ್ರೆ ಹುಡುಗಿಯರಿಗೆ ಅಚ್ಚುಮೆಚ್ಚು. ಮದುವೆ ಆದ್ರೆ ಕೊಹ್ಲಿಯನ್ನೇ ಆಗೋದು ಎಂದುಕೊಂಡಿರುವ ಹುಡುಗಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಕನಸಿನಲ್ಲಿ ಕಾಡುವ ಈ ಹುಡುಗನ ಹುಚ್ಚು ಅನೇಕರಿಗಿದೆ. ಅಂತದ್ರಲ್ಲಿ ಈ ಇಂಗ್ಲೆಂಡ್​ನ ಬ್ಯೂಟಿಫುಲ್ ಕ್ರಿಕೆಟರ್ ಡೇನಿಯಲ್ ವ್ಯಾಟ್​​ ಕೂಡ ಹೊರತಲ್ಲ.. ಡೇನಿಯಲ್​ಗೂ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಲವ್. ಮೊದಲೇ ಕೊಹ್ಲಿಯ ಅಪ್ಪಟ್ಟ ಅಭಿಮಾನಿಯಾಗಿರೋ ಡೇನಿಯಲ್ 2014 ರಲ್ಲಿ ವಿರಾಟ್ ಕೊಹ್ಲಿಯ ಮುಂದೆ ತನ್ನ ಮದುವೆಯ ಪ್ರಪೋಸಲ್ ಇಟ್ಟಿದ್ಲು.

ಈ ಮೂಲಕ ಭಾರೀ ಸದ್ದು ಮಾಡಿದ್ದ ಡೇನಿಯಲ್ ವ್ಯಾಟ್ ಇದೀಗ, ಮತ್ತೊಮ್ಮೆ ಕೊಹ್ಲಿ ವಿಷಯದಲ್ಲಿ ಸುದ್ದಿಯಾಗಿದ್ದಾಳೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಡೇನಿಯಲ್​ಗೆ ಕ್ರಿಕೆಟ್​ ಬ್ಯಾಟ್​ವೊಂದನ್ನ ಗಿಫ್ಟ್ ಆಗಿ ಕಳುಹಿಸಿದ್ದಾರೆ. ಕೊಹ್ಲಿಯಿಂದ ಸಿಕ್ಕಿರೋ ಗಿಫ್ಟ್​ಗೆ ಫಿದಾ ಆಗಿರೋ ಡೇನಿಯಲ್ ಸಾಮಾಜಿಕ ಜಾಲತಾಣದಲ್ಲಿ ಅದನ್ನ ಪೋಸ್ಟ್ ಮಾಡಿದ್ದಾಳೆ.ಕೊಹ್ಲಿ ನೀಡಿರೋ ಈ ಬ್ಯಾಟ್​ನಿಂದ ಆಡೋಕೆ ನಾನು ಉತ್ಸುಕಳಾಗಿದ್ದೇನೆ, ಮುಂಭರುವ ಆ್ಯಶಸ್​​ ಸರಣಿಯಲ್ಲಿ ಇದೇ ಬ್ಯಾಟ್​ನೊಂದಿಗೆ ಕಣಕ್ಕಿಳಿಯುದಾಗಿ ಡೇನಿಯಲ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾಳೆ. ಅಲ್ದೇ, ಬ್ಯಾಟ್​ನ ತುದಿಯಲ್ಲಿ ವಿರಾಟ್ ಕೊಹ್ಲಿ ಎಂದು ಬರೆದಿರುವ ಪೋಟೋವನ್ನ ಕೂಡ ಡೇನಿಯಲ್ ಪೋಸ್ಟ್ ಮಾಡಿದ್ದಾಳೆ.

ಒಟ್ನಲ್ಲಿ ಟೀಮ್ ಇಂಡಿಯಾದ ಈ ರನ್​ ಮಷೀನ್​ಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳ ಬಳಗವಿದೆ. ಅದ್ರಲ್ಲಿ ಮಹಿಳೆಯರ ಸಂಖ್ಯೆಯೆ ಹೆಚ್ಚು. ಆದ್ರೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ವಿರಾಟ್ ಇದೀಗ ಡೇನಿಯಲ್​ಗೆ ಬ್ಯಾಟ್​ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ ಹಿಂದೆ ಪಾಕ್​ ಕ್ರಿಕೆಟರ್ ಮೊಹಮ್ಮದ್ ಅಮೀರ್​ಗೂ ಕೊಹ್ಲಿ ಬ್ಯಾಟ್​ ಗಿಫ್ಟ್ ನೀಡಿದನ್ನ ನಾವೂ ಇಲ್ಲಿ ಸ್ಮರಿಸಬಹುದು.
ಶಿವಕುಮಾರ್ ಕೆ. ಸ್ಪೋರ್ಟ್ಸ್ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *