ಖರ್ಜೂರ ತಿಂದ್ರೆ ಎಷ್ಟೆಲ್ಲಾ ಉಪಯೋಗ ಇದೆ ಗೊತ್ತಾ.??

ಹೃದಯಕ್ಕೆ ಒಳ್ಳೆಯದು:
ಒಣ ಖರ್ಜೂರದಲ್ಲಿ ಕೊಬ್ಬಿನಂಶ ಕಡಿಮೆ. ಹಾಗಾಗಿ ಇದು ಹೃದಯಕ್ಕೆ ಒಳ್ಳೆಯದು.  ಅಲ್ಲದೆ ಇವುಗಳಲ್ಲಿ ಬೇಡದ ಕೊಬ್ಬಿನಂಶ ನಿಯಂತ್ರಿಸುವ ಗುಣವೂ ಇದೆಯಂತೆ.

ಜೀರ್ಣಕ್ರಿಯೆಗೆ:
ಒಣ ಖರ್ಜೂರದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು, ಇದು ಜೀರ್ಣ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ತೂಕ ಕಳೆದುಕೊಳ್ಳಲು ಬಯಸುವವರೂ ಇದನ್ನು ಸೇವಿಸಬಹುದು.

ಎಲುಬು ಮತ್ತು ಹಲ್ಲು ಗಟ್ಟಿಯಾಗುತ್ತವೆ:
ಒಣ ಖರ್ಜೂರದಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಹಾಗಾಗಿ ಇದು ಎಲುಬು ಮತ್ತು ಹಲ್ಲು ಗಟ್ಟಿಗೊಳಿಸಲು ಉತ್ತಮ. ಅಷ್ಟೇ ಅಲ್ಲದೆ, ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯಿಂದ ಬರುವ ಆರ್ಥರೈಟಿಸ್ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

ಶಕ್ತಿವರ್ಧಕ:
ಕ್ರೀಡಾಳುಗಳು, ದೈಹಿಕವಾಗಿ ಶ್ರಮ ವಹಿಸುವವರು ಇದನ್ನು ಸೇವಿಸುವುದು ಒಳ್ಳೆಯದು. ಇದರಲ್ಲಿ ನೈಸರ್ಗಿಕ ಸಕ್ಕರೆಯಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಕೂದಲು ಮತ್ತು ಚರ್ಮಕ್ಕೆ:
ಇದರಲ್ಲಿ ವಿಟಮಿನ್ ಬಿ5 ಹೇರಳವಾಗಿದ್ದು, ಇದು ಚರ್ಮ ಸುಕ್ಕು ಗಟ್ಟುವಿಕೆ ತಡೆಯುವುದಲ್ಲದೆ, ಕೂದಲಿನ ಆರೋಗ್ಯವನ್ನೂ ಕಾಪಾಡುವ ಗುಣ ಹೊಂದಿದೆ.

0

Leave a Reply

Your email address will not be published. Required fields are marked *