ಉತ್ತರಪ್ರದೇಶ ಅಪಘಾತ: ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಬರೇಲಿ: ಉತ್ತರಪ್ರದೇಶದ ಬರೇಲಿಯಲ್ಲಿ ನಡೆದ ಬಸ್ ಅಪಘಾತಕ್ಕೆ ಮಡಿದವರ ಸಂಖ್ಯೆ 22ಕ್ಕೆ ಏರಿದೆ. ಇಂದು ಮುಂಜಾನೆ 2 ಗಂಟೆಗೆ ಬರೇಲಿಯಲ್ಲಿ ಬಸ್ – ಟ್ರಕ್ ನಡುವಿನ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಈ ವೇಳೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಒಟ್ಟು 37 ವ್ಯಾಪಾರಿಗಳು ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಟ್ಟು ಕರಕಲಾದ ಶವಗಳನ್ನು ಗುರುತಿಸುವುದು ಕೂಡ ಕಷ್ಟವಾಗಿದೆ ಎಂದು ಕೂಡ ವರದಿಯಾಗಿದೆ. ಉತ್ತರಪ್ರದೇಶದಿಂದ ದೆಹಲಿಗೆ ಈ ಬಸ್ ಪ್ರಯಾಣಿಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

0

Leave a Reply

Your email address will not be published. Required fields are marked *