ರೋಹಿಂಗ್ಯನ್ನರನ್ನು ಹೊರಹಾಕುವ ಕ್ರಮ ಖಂಡಿಸಿದ ವಿಶ್ವಸಂಸ್ಥೆ

ನವದೆಹಲಿ: ದೇಶದಲ್ಲಿ ನೆಲೆಸಿರುವ 40,000 ರೋಹಿಂಗ್ಯಾ ನಿರಾಶ್ರಿತರನ್ನು ದೇಶದಿಂದ ಹೊರಹಾಕುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿಗಳು ಖಂಡಿಸಿದ್ದಾರೆ. ರೋಹಿಂಗ್ಯನ್ನರನ್ನು ದೇಶದಿಂದ ಹೊರ ಹಾಕುವ ಕೇಂದ್ರ ಸರ್ಕಾರ ಈ ಕ್ರಮ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತೆ ಎಂದು ಕೂಡ ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. ಆದರೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಆಯುಕ್ತ ಜೀದ್ ಬಿನ್ ರಾದ್ ಅಲ್ ಹುಸೇನ್ ಅವರ ಖಂಡನೆ ಕುರಿತು ವಿದೇಶಾಂಗ ಸಚಿವಾಲಯ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏಕಕಾಲಕ್ಕೆ ರೋಹಿಂಗ್ಯನ್ನರನ್ನು ದೇಶದಿಂದ ಹೊರಹಾಕುವಷ್ಟು ದೇಶದಲ್ಲಿ ಹಿಂಸೆಗೆ ಅವರು ಕಾರಣರಾಗಿದ್ದಾರೆಯೇ ಎಂದು ಕೂಡ ಹುಸೇನ್ ಪ್ರಶ್ನಿಸಿದ್ದಾರೆ. ಅಲ್ಲದೇ, ಮಯನ್ಮಾರ್​​ನಲ್ಲಿ ರೋಹಿಂಗ್ಯನ್ನರ ವಿರುದ್ಧ ನಡೆದ ಹಿಂಸಾಚಾರವನ್ನು ಜನಾಂಗೀಯ ಶುದ್ಧೀಕರಣಕ್ಕೆ ಹೋಲಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರನ್ ರಿಜಿಜು, 40,000 ರೋಹಿಂಗ್ಯನ್ ನಿರಾಶ್ರಿತರನ್ನು ದೇಶದಿಂದ ಕಳುಹಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಪ್ರತಿಕ್ರಿಯಿಸಿದೆ.

0

Leave a Reply

Your email address will not be published. Required fields are marked *