ಹಾಪುರ FCI ಸಿಲೋಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಭೇಟಿ

Food Corporation Of India: ಉತ್ತರ ಪ್ರದೇಶದ 22 ಸ್ಥಳಗಳಲ್ಲಿ 9.25 LMT ಆಹಾರ ಧಾನ್ಯ ಸಂಗ್ರಹದ ಸಿಲೋಸ್‌ಗಳ ನಿರ್ಮಾಣದ ಮೊದಲ ಹಂತವನ್ನು ಅನುಮೋದಿಸಲಾಗಿದೆ

ನವದೆಹಲಿ: ದೇಶದ ಅತ್ಯಂತ ಹಳೆಯ ಧಾನ್ಯ ಸಂಗ್ರಹ ಕೇಂದ್ರ ಹಾಪುರದ FCI ಸಿಲೋಗೆ ಇಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಸದ ಅರುಣ್ ಗೋಯಲ್ ಅವರೊಂದಿಗೆ ಭೇಟಿ ನೀಡಿದ್ದ ಸಚಿವರು, ಇದು ದೇಶದ ಅತ್ಯಂತ ಹಳೆಯ ಧಾನ್ಯ ಸಂಗ್ರಹ ಕೇಂದ್ರವಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದ 22 ಸ್ಥಳಗಳಲ್ಲಿ 9.25 LMT ಆಹಾರ ಧಾನ್ಯ ಸಂಗ್ರಹದ ಸಿಲೋಸ್‌ಗಳ ನಿರ್ಮಾಣದ ಮೊದಲ ಹಂತವನ್ನು ಅನುಮೋದಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಎರಡನೇ ಹಂತದಲ್ಲಿ 3.25 LMT ಯ 5 ಸ್ಥಳಗಳಿಗೆ ಮುಂದಿನ ದಿನಗಳಲ್ಲಿ ಅನುಮೋದನೆ ದೊರೆಯಲಿದೆ ಎಂದೂ ತಿಳಿಸಿದರು.

ಎಥೆನಾಲ್ ಸ್ಥಾವರಕ್ಕೆ ಭೇಟಿ:

ಅಲ್ಲದೇ, ಗಾಜಿಯಾಬಾದ್ ಬಳಿಯ ಎಥೆನಾಲ್ ಸ್ಥಾವರಕ್ಕು ಭೇಟಿ ನೀಡಿ, ಎಥೆನಾಲ್ ಉತ್ಪಾದನೆಯ ಹಂತಗಳ ಕುರಿತು ಪರಿಶೀಲಿಸಿದರು.

Author

error: