ಪ್ಯಾರಿಸ್ ಹವಾಮಾನ ಒಪ್ಪಂದ: ಅಮೆರಿಕವನ್ನು ಎಚ್ಚರಿಸಿದ ವಿಶ್ವಸಂಸ್ಥೆ

ಲಂಡನ್​​: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್​​ ಖಂಡಿಸಿದ್ದಾರೆ. ಅಲ್ಲದೇ, ಈ ನಿರ್ಧಾರದಿಂದಾಗಿ ದೇಶದ ಆರ್ಥಿಕತೆ, ಭದ್ರತೆ ಮತ್ತು ಸಾಮಾಜಿಕವಾಗಿ ಕೂಡ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನ್ಯೂಯಾರ್ಕ್​​ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಮಾತನಾಡಿದ ಅವರು 200 ದೇಶಗಳು ಸಹಿ ಹಾಕಿರುವ ಈ ಒಪ್ಪಂದವನ್ನು ಮುಂದುವರೆಸುವುದರ ಕುರಿತು ಅಮೆರಿಕ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹಸಿರುಮನೆ ಪರಿಣಾಮ ನಿಯಂತ್ರಿಸುವ ಕುರಿತ ಈ ಒಪ್ಪಂದವನ್ನು ಬೆಂಬಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾವುದಾದರೂ ದೇಶ ಪ್ಯಾರಿಸ್ ಒಪ್ಪಂದವನ್ನು ನಿರರ್ಥಕವೆಂದು ಕೈಬಿಟ್ಟಲ್ಲಿ, ಮತ್ತೊಂದು ದೇಶ ಅವರ ಸ್ಥಳ ತುಂಬಲಿದೆ ಎಂ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ಯಾರಿಸ್ ಒಪ್ಪಂದವನ್ನು ನಿರಾಕರಿಸಿದಲ್ಲಿ ಅಮೆರಿಕದ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಅವರು ಈ ವೇಳೆ ಮಾತನಾಡಿದರು.

ಇಂದು ಆರ್ಥಿಕ, ಸಾಮಾಜಿಕ ಅಂಶಗಳು ಪರಿಸರ ಅಂಶಗಳೊಂದಿಗೆ ಬೆಸೆದುಕೊಂಡಿವೆ. ಆದರೆ, ಇದು ಭದ್ರತೆಯ ವಿಷಯಕ್ಕೂ ಅನ್ವಯಿಸುತ್ತದೆ. ಇದೊಂದು ಸಂಕೀರ್ಣವಾದ ಸಂಗತಿಯಾಗಿದೆ. ಇನ್ನೊಂದು ದೇಶಕ್ಕಾಗಿ ಪ್ಯಾರಿಸ್ ಒಪ್ಪಂದವನ್ನು ಕೈಬಿಟ್ಟಲ್ಲಿ, ನಿಮ್ಮ ದೇಶದ ಆಂತರಿಕ ಭದ್ರತೆಗೆ ಸಮಸ್ಯೆ ಎದುರಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಇದೇ ವೇಳೆ ಅವರು ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿರುವಂತೆ ವಿಶ್ವ ಸಮುದಾಯದ ನಾಯಕರಿಗೆ ಕರೆ ನೀಡಿದರು. ಪ್ಯಾರಿಸ್ ಒಪ್ಪಂದ ಐತಿಹಾಸಿಕ ನಿರ್ಣಯ. ಆದರೆ, 2 ಡಿಗ್ರಿಯಷ್ಟು ತಾಪಮಾನ ನಿಯಂತ್ರಣದ ವಿಷಯದಲ್ಲಿ ಇನ್ನೂ ವಿಫಲವಾಗಿದ್ದೇವೆ ಎಂದು ಅವರು ಭವಿಷ್ಯದ ಬಗೆಗೆ ಆತಂಕವನ್ನು ವ್ಯಕ್ತಪಡಿಸಿದರು.

ಜಾಗತಿಕ ತಾಪಮಾನ ನಿಯಂತ್ರಣದ ಮಹತ್ವಾಕಾಂಕ್ಷೆಯನ್ನು ನಾವು ಕ್ರಿಯಾರೂಪಕ್ಕೆ ಇಳಿಸಬೇಕು. ಎಲ್ಲಿಯವರೆಗೆ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ನಿಧಾನಗತಿಯಲ್ಲಿರುತ್ತೇವೆ ಎಂದರು.

2015ರ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಇದುವರೆಗೆ 196 ದೇಶಗಳು ಸಹಿ ಹಾಕಿವೆ. ಇದೇ ವರ್ಷದ ನವೆಂಬರ್​​ನಿಂದ ಜಾರಿಗೆ ಬರಬೇಕಿದೆ. ಜಾಗತಿಕ ತಾಪಮಾನವನ್ನು ಕನಿಷ್ಠ 2 ಡಿಗ್ರಿಯಷ್ಟು ಇಳಿಸುವ ಮಹತ್ವದ ನಿರ್ಣಯವನ್ನು ಪ್ಯಾರಿಸ್ ಒಪ್ಪಂದದಲ್ಲಿ ತೆಗೆದುಕೊಳ್ಳಲಾಗಿದೆ. ಇದುವರೆಗೆ 147 ದೇಶಗಳು (ಶೇ.82ರಷ್ಟು) ದೇಶಗಳು ಹಸಿರುಮನೆ ಪರಿಣಾಮವನ್ನು ತಗ್ಗಿಸುವ ಒಪ್ಪಂದವನ್ನು ಅನುಮೋದಿಸಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *