ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈದ ಸೇನೆ

ಶ್ರೀನಗರ: ಜಮ್ಮು ಕಾಶ್ಮೀರದ ಸೊಪೊರ್​​ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಮುಂಜಾನೆ 3:30ರ ವೇಳೆಗೆ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 21ನೇ ರಾಷ್ಟ್ರೀಯ ರೈಫಲ್ಸ್​ ಪಡೆ ನಡೆಸಿದ ಶೋಧಕಾರ್ಯ ನಡೆಸಿತ್ತು. ರಾಜಧಾನಿ ಶ್ರೀನಗರದಿಂದ 70 ಕಿ.ಮೀ. ದೂರದಲ್ಲಿರುವ ವೇಳೆ ನಾತಿಪೊರ ಗ್ರಾಮದ ಸೊಪೋರ್​​ ಬಳಿ ಈ ಹತ್ಯೆ ನಡೆದಿದೆ.

ಮನೆಯೊಂದರಲ್ಲಿ ರಂಧ್ರ ಕೊರೆದುಕೊಂಡು ಅವಿತುಕೊಂಡಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಈ ನಡುವೆ ಸೇನೆಯ ಉತ್ತರ ಕಮ್ಯಾಂಡ್​ ಎಕೆ – 47, 5 ಮ್ಯಾಗಜೈನ್ಸ್​​, 107 ಗುಂಡುಗಳು, 2 ಚೀಲಗಳು, 2,000 ರೂ. ನಗದು, ಎರಡು ರಬ್ಬರ್ ಸ್ಟಾಂಪ್​ಗಳನ್ನು ಭಯೋತ್ಪಾಕದರಿಂದ ವಶಪಡಿಸಿಕೊಂಡಿದೆ. ನಿನ್ನೆ ಸೊಪೋರ್​​ ಪೊಲೀಸ್ ಠಾಣೆಯ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈದಾಳಿಗೆ 4 ಪೊಲೀಸರು ಗಾಯಗೊಂಡಿದ್ದರು.

ಅಕ್ಟೋಬರ್ 2016ರಿಂದ ಶಸ್ತ್ರಸಜ್ಜಿತ ದರೋಡೆಕೋರರು ಜಮ್ಮು ಕಾಶ್ಮೀರದ 13 ವಿವಿಧ ಬ್ಯಾಂಕ್​​ಗಳಲ್ಲಿ 92 ಲಕ್ಷ ರೂ.ಗಳನ್ನು ಲೂಟಿ ಮಾಡಿದ್ದಾರೆ. ಈ ತಿಂಗಳಲ್ಲೇ 4 ಬಾರಿ ದರೋಡೆ ನಡೆಸಲಾಗಿದೆ. ಮೇ 1ರಂದು ದರೋಡೆಕೋರರು 5 ಪೊಲೀಸರು ಮತ್ತು ಇಬ್ಬರು ಬ್ಯಾಂಕ್​ ಭದ್ರತಾ ಸಿಬ್ಬಂದಿಗಳನ್ನು ಪುಲ್ವಾಮ ಜಿಲ್ಲೆಯಲ್ಲಿ ಕೊಂದಿದ್ದರು.

ಹಿಜ್ಬುಲ್ ಮುಜಾಹಿದೀನ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಜೂನ್ 9, 2016ರಂದು ಎನ್​ಕೌಂಟರ್​​ನಲ್ಲಿ ಹತ್ಯೆಗೈಯಲಾಗಿತ್ತು. ನಂತರ ಶ್ರೀನಗರದಲ್ಲಿ ದಾಳಿ, ಕಲ್ಲೆಸೆತ, ಲೂಟಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಮಾತನಾಡಿದ ರಾಜನಾಥ್ ಸಿಂಗ್ ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದರು. ಅಲ್ಲದೇ, ಸೇನೆಯ ಕಾರ್ಯವನ್ನು ಪ್ರಶಂಸಿಸಿದಲ್ಲಿ ಸೈನಿಕರು ಸಂತೋಷಪಡುತ್ತಾರೆ ಎಂದು ಕೂಡ ಅಭಿಪ್ರಾಯಪಟ್ಟಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *