ಯಮುನಾ ನದಿಯಲ್ಲಿ ಮುಳುಗಿದ ಇಬ್ಬರು ಬಾಲಕರು

ದೆಹಲಿ: ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡಲು ನೀರಿಗಿಳಿದ ಇಬ್ಬರು ಬಾಲಕರು ಸಾವಿಗೀಡಾದ ದುರ್ಘಟನೆ ವರದಿಯಾಗಿದೆ. ದೆಹಲಿಯ ಬುರಾರಿ ಪ್ರದೇಶದಲ್ಲಿ ನದಿ ದಡದಲ್ಲಿ ನಡೆಯುತ್ತಿದ್ದ ಬಾಲಕರು ಇದ್ದಕ್ಕಿದ್ದಂತೆ ಈಜಲು ನೀರಿಗಿಳಿದಿದ್ದಾರೆ. ಆದರೆ, ನದಿ ಪಾತ್ರದ ಹರಿವಿನಲ್ಲಿ ಈಜಲಾಗದೆ ಅವರು ಮುಳುಗಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಲಾಗಿದೆ. ಆದರೆ, ಅವರನ್ನು ನೀರಿನ ಮಡುವಿನಿಂದ ಮೇಲೆ ತರುವ ವೇಳೆಗಾಗಲೇ 14 – 15ರ ವಯೋಮಾನದ ಇಬ್ಬರೂ ಬಾಲಕರು ಸಾವನ್ನಪ್ಪಿದ್ದರು.

0

Leave a Reply

Your email address will not be published. Required fields are marked *