ಟ್ರ್ಯಾಕ್ಟರ್​ ಮತ್ತು ಕ್ರುಝರ್​​ ಮುಖಾಮುಖಿ ಡಿಕ್ಕಿ: 5 ಕುಸ್ತಿಪಟುಗಳ ಸಾವು

ಚಿಕ್ಕೋಡಿ: ಟ್ರ್ಯಾಕ್ಟರ್​ ಮತ್ತು ಕ್ರುಝರ್​​ ವಾಹನ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ 5 ಜನ ಕುಸ್ತಿ ಆಟಗಾರರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂ ತಾಲೂಕಿನ ವಾಂಗಿ ಗ್ರಾಮದ ಬಳಿ ನಡೆದಿದೆ. ಮೃತ ಕುಸ್ತಿಪಟುಗಳನ್ನು ಆಕಾಶ ದೆಸಾಯಿ, ವಿಜಯ ಪಾಟೀಲ, ಸೌರಭ ಮಾನೆ, ಶುಭಂ ಘಾರಗೆ ಎಂದು ಗುರುತಿಸಲಾಗಿದ್ದು, ಇನ್ನುಲಿದ 6 ಕುಸ್ತಿ ಆಟಗಾರರಿಗೆ ಗಂಭೀರ ಗಾಯಗಳಾಗಿವೆ. ಸತಾರಾದಿಂದ ಕುಸ್ತಿ ಪಂದ್ಯ ಮುಗಿದ ಬಳಿಕ ತಮ್ಮ ಸ್ವಗ್ರಾಮಗಳಿಗೆ ಮರಳುವಾಗ ಸಂಭವಿಸಿದ ಅಪಘಾತ ಇದಾಗಿದ್ದು, ಕ್ರೂಜರ್ ವಾಹನದಲ್ಲಿ ಒಟ್ಟು ೧೪ ಜನ ಕುಸ್ತಿ ಆಟಗಾರ ಇದ್ದರೂ ಇನ್ನೂ 6 ಜನರ ಸ್ಥಿತಿ ಚಿಂತಾಜನಕವಾಗಿದೆ. ಕುಸ್ತಿ ಪಟುಗಳಲ್ಲಿ ಹಲವರು ಸಾಂಗ್ಲಿ ಜಿಲ್ಲೆಯ ಕುಂದಲ ಗ್ರಾಮದ ಕ್ರಾಂತಿ ಕುಸ್ತಿ ಸಂಘಕ್ಕೆ ಸೇರಿದವರಾಗಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಗಾಯಾಳುಗಳಿಗೆ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.

0

Leave a Reply

Your email address will not be published. Required fields are marked *