ಬರೋಕೆ ಸಜ್ಜಾಯ್ತಾ ಶ್ರೀದೇವಿಯ ಬಯೋಪಿಕ್ ಸಿನಿಮಾ?

ಸಾಮಾನ್ಯವಾಗಿ ಕಲಾವಿಧರಿಗೆ ಮೇರು ನಟ-ನಟಿಯರ ಜೀವನ ಚರಿತ್ರೆ ಸಿನಿಮಾಗಳನ್ನ ಮಾಡಬೇಕೆಂಬ ಹೆಬ್ಬಯಕೆ ಇದ್ದೇ ಇರುತ್ತೆ. ಈಗಾಗ್ಲೆ ಸಾಕಷ್ಟು ಬಯೋಪಿಕ್ ಸಿನಿಮಾಗಳು ತೆರೆ ಕಂಡಿವೆ. ಇದೀಗ ತಮನ್ನಾಗೂ ಅದೇ ಆಸೆ ಆಗಿದೆಯಂತೆ.ಸ್ಯಾಂಡಲ್ ವುಡ್,ಬಾಲಿವುಡ್,ಹಾಲಿವುಡ್ ಟಾಲಿವುಡ್,ಕಾಲಿವುಡ್ ಹೀಗೆ ಎಲ್ಲಾ ಹೀಗೆ ಎಲ್ಲ ಸಿನಿರಂಗದಲ್ಲೂ ಮೇರು ನಟ,ನಟಿಯರ ಜೀವನಾಧರಿತ ಸಿನಿಮಾಗಳು ತೆರೆಕಂಡಿವೆ.ಜೊತೆಗೆ ಎಷ್ಟೋ ಜನ ನಟ-ನಟ,ನಿರ್ಮಾಪಕ,ನಿರ್ದೇಶಕರು ಈ ಕುರಿತು ಸಿನಿಮಾ ಮಾಡೋಕೆ ಕಾದು ಕುಳಿತಿರೋ ಗೊತ್ತಿರೋದೆ.ಕನ್ನಡದಲ್ಲಿ ಕಲ್ಪನಾ ,ತೆಲುಗಿನಲ್ಲಿ ಈಗ ಸೂಪರ್ ಸಕ್ಸಸ್ ಕಾಣ್ತಾ ಇರೋ ಮಹಾನಟಿ ಸಾವಿತ್ರಿ ,ಬಾಲಿವುಡ್ನಲ್ಲಿ ಸಂಜಯ್ ದತ್ ಜೀವನಾಧರಿತ ಹಾಗೂ ಕಾಲಿವುಡ್ ನಲ್ಲೂ ಸಹ ಕೆಲವು ಸಿನಿಮಾ ಗಳು ತೆರೆಕಂಡವಾದರೆ ಇನ್ನೂ ಕೆಲವು ಸಿನಿಮಾಗಳು ಟೀಸರ್ ಮತ್ತು ಟ್ರೈಲರ್ ಮೂಲಕ ಸಿನಿಮಾದ ಮೇಲಿನ ಕ್ಯೂರಿಯಾಸಿಟಿನಾ ಬಿಲ್ಡ್ ಮಾಡಿದೆ.

ಬಾಲಿವುಡ್ ನ ಬ್ಯೂಟಿ ಕ್ವೀನ್ ಶ್ರೀದೇವಿ ನಮ್ಮನ್ನ ಅಗಲಿ ತುಂಬಾ ದಿನಗಳೇ ಆಗಿವೆ.ಆದರೆ ಶ್ರೀದೇವಿ ಅಂತ ಹೆಸರು ಕೇಳಿದಾಗ ಯಾರಿಗಾದರೂ ಈ ಸುಂದರ ಮುಖ ನೆನಪಿಗೆ ಬಾರದೇ ಇರದು…. ಚಿತ್ರರಂಗ ಕಂಡ ಅಪ್ರತಿಮ ಪ್ರತಿಭೆಗಳಲ್ಲೊಂದು ಈ ಶ್ರೀದೇವಿ. ಭಾರತೀಯ ಚಿತ್ರರಂಗದಲ್ಲಿ ಜನಪ್ರೀಯತೆ ಉತ್ತುಂಗವನ್ನ ಕಂಡ ಅಪೂರ್ವ ಕಲಾವಿದೆ ಈಕೆ…ಇಂಥಹ ಭಾರತೀಯ ಸಿನಿರಸಿಕರ ಮನೆಗೆದ್ದು ನೂರಾರು ಪ್ರಶಸ್ತಿಗಳನ್ನು ಪಡೆದು ದೇಶಾದ್ಯಂತ ಅಭಿಮಾಗಳನ್ನ ಮೋಡಿ ಮಾಡಿದ ಈಕೆಯ ಕುರಿತು ಬಾಲಿವುಡ್ ನ್ನಲ್ಲಿ ಒಂದು ಸಿನಿಮಾ ಬರಬಹುದು ಎಂಬ ಮಾತುಗಳು ಕೇಳಿಬರ್ತಾ ಇವೆ.ಆದ್ರೆ ವಿಷ್ಯಾ ಏನಪ್ಪಾ ಅಂದ್ರೆ ಈಕೆಯ ಕುರಿತು ಸಿನಿಮಾ ಬರುತ್ತೂ ಇಲ್ವೋ ಗೊತ್ತಿಲ್ಲ ಆದ್ರೆ ಸಿನಿಮಾ ಬರೋದೆ ಆದ್ರೆ ಹೀರೋಯನ್ ಆಗೋಕೆ ರೆಡಿ ಇದಾರೆ.ಅವರೇ ತೆಲುಗಿನ ಬ್ಯೂಟಿ ತಮನ್ನ.

ನಟಿ ತಮನ್ನಾ ತಮ್ಮದೇ ಆದ ನಟನಾ ಮೂಲಕ ಕೋಟ್ಯಾಂತರ ಅಭಿಮಾನಿ ಬಳಗವನ್ನ ಪಡೆದವರು. ಇದೀಗ ಸದ್ಯ ’ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ತಮನ್ನಾಗೆ ಪ್ರಮುಖ ವ್ಯಕ್ತಿಗಳ ಜೀವನಚರಿತ್ರೆ ಸಿನಿಮಾಗಳಲ್ಲಿ ನಟಿಸಲು ಬಹಳ ಇಷ್ಟವಂತೆ.ಹಾಗಾಗಿ ಬಾಲಿವುಡ್ ನ ಫೇಮಸ್ ಲೆಜಂಡರಿ ವುಮೆನ್ ಶ್ರೀದೇವಿಯ ಕುರಿತಾಗಿ ಸಿನಿಮಾ ಬಂದ್ರೆ ಅದರಲ್ಲಿ ನಟಿಸುವ ಆಸೆಯಿದೆಯಂತೆ.ತಮನ್ನಾ ಭಾಟಿಯಾ ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿ ಹೆಸರು ಮಾಡಿದವರು. ಸದ್ಯಕ್ಕೆ ತಮನ್ನಾ ಕಲ್ಯಾಣ್ ರಾಮ್ ನಂದಮೂರಿ ಜೊತೆ ಅಭಿನಯಿಸಿರುವ ’ನಾ ನುವ್ವೇ’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.ಸದ್ಯ ಸೈರಾ ನರಸಿಂಹ ರೆಡ್ಡಿ ಸ್ವಾತಂತ್ಯ್ರ ಹೋರಾಟಗಾರ ’ಉಯ್ಯಾಲವಾಡ ನರಸಿಂಹರೆಡ್ಡಿ’ ಅವರ ಜೀವನಚರಿತ್ರೆಯನ್ನು ಒಳಗೊಂಡ ಸಿನಿಮಾವಂತೆ. ಸದ್ಯಕ್ಕೆ ತಮನ್ನಾ ಕಂಗನಾ ರಣಾವತ್ ಹಿಂದಿ ಸಿನಿಮಾ ಕ್ವೀನ್ ರೀಮೇಕ್ ಸಿನಿಮಾ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆ.ಇನ್ನೂ ಅವರಾಸೆಯಂತೆ ಶ್ರೀದೇವಿಯ ಬೈಯೋಪಿಕ್ ನಲ್ಲಿ ನಟಿಸ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

ಅಕ್ಷತಾ ಗೌಡ ,ಫಿಲ್ಮಂ ಬ್ಯೂರೋ ಸುದ್ದಿ ಟಿ.ವಿ

0

Leave a Reply

Your email address will not be published. Required fields are marked *