ಒಟ್ಟಿಗೆ ಬಣ್ಣ ಹಚ್ಚಲಿದ್ದಾರಂತೆ ಈ ಕುಚುಕು ನಟರು

ಒಂದು ಕಾಲದಲ್ಲಿ ಸಪೋರ್ಟಿಂಗ್​​​​​​ ರೋಲ್​​ಗಳ ಮೂಲಕ ಸಿನಿಮಾಗಳಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿ ಈ ಇಬ್ಬರು ಈಗ ಕನ್ನಡ ಸ್ಟಾರ್​​ ನಟರು. ಈ ಕುಚುಕು ಗೆಳೆಯರ ಜೀವನದಲ್ಲಿ ಟರ್ನಿಂಗ್​ ಪಾಯಿಂಟ್​​​​ ಸಿಕ್ಕಿದ್ದೆ 2006-20007ರಲ್ಲಿ. ಕಷ್ಟಪಟ್ಟು ಈಗ ಒಂದು ಹಂತಕ್ಕೆ ತಲುಪಿರುವ ಈ ಸ್ನೇಹಿತರು ಒಟ್ಟಿಗೆ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಚಿತ್ರದ ಬಗ್ಗೆ ಹೆಚ್ಚಾಗೇನು ಹೇಳ ಬೇಕಿಲ್ಲ. ಯಾಕಂದ್ರೆ ಈ ಸಿನಿಮಾ ಜೀವನವನ್ನ ಕಟ್ಟಿಕೊಟ್ಟಿದ್ದು ಒಬ್ಬಿಬ್ಬರಿಗಲ್ಲ. ಯೋಗರಾಜ್​​ ಭಟ್​​ ಅಂತ ಒಬ್ಬ ಡೈರೆಕ್ಟರ್​​ ಇದ್ದಾರೆ ಅಂತ ಕರ್ನಾಟಕಕ್ಕೆ ಜಾಹೀರಾಗಿದ್ದೆ ಈ ಸಿನಿಮಾ ಮೂಲಕ. ಜೊತೆಗೆ ಗಣೇಶ್​​ ಎಂಬ ಕಾಮಿಡಿ ಟೈಮ್​​ ಹುಡುಗ ಗೋಲ್ಡನ್​​ ಸ್ಟಾರ್​​ ಆಗಲು ಕಾರಣವಾದದ್ದು ಇದೆ ಸಿನಿಮಾ. ಪೂಜಾ ಗಾಂಧಿಗೆ ಕನ್ನಡದಲ್ಲಿ ಲೈಫ್​​ ಕೊಡ್ತು. ಕನ್ನಡ ಚಿತ್ರರಂಗ ದಿಕ್ಕನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಈ ಎಲ್ಲ ಜಾದು ನಡೆದದ್ದು 2006ರಲ್ಲಿ.

ಮುಂಗಾರು ಮಳೆ ಸಿನಿಮಾ ಬಂದು ಹೊಸದಾಗಿ ಸಿನಿಮಾ ಮಾಡುವವರಿಗೆ, ಮಾಡಬೇಕೆಂದವರಿಗೆ ಸ್ಪೂರ್ತಿಯಾಯ್ತು. ಹೀಗಾಗೆ ಹಲವರು ಹೊಸ ಹೊಸ ಕಥೆಯ ಮೂಲಕ ಇಂಡಸ್ಟ್ರಿಯ ಕದ ತಟ್ಟಿದ್ರು. ಹೀಗೆ ಬಂದ ಮತ್ತೊಂದು ಜೋಡಿ ದುನಿಯಾ ವಿಜಿ ಹಾಗೆ ನಿರ್ದೇಶಕ ಸೂರಿ ಅವರದ್ದು. ಖಳನಟರ ಗುಂಪಿನಲ್ಲಿದ್ದು, ಹೀರೊಗಳ ಕೈಲಿ ಒದೆ ತಿನ್ತಾ ಇದ್ದ ದುನಿಯಾ ವಿಜಿ, ಆನಂತರ ದೊಡ್ಡ ನಟನಾಗಿ ಬೆಳೆದು, ಅದೇ ಹೀರೊ ಸ್ಥಾನದಲ್ಲಿ ನಿಂತು ಹಲವಾರು ವಿಲನ್​​ಗೆ ಗೂಸ ಕೊಟ್ಟಿದ್ರು. ಈಗ ವಿಜಯ್​​ ಅವರೂ ಸಹ ತಲುಪಿರುವ ಸ್ಥಾನದ ಬಗ್ಗೆ ನಿಮಗೆ ಗೊತ್ತಿದೆ. ಹೀಗೆ ಸಿನಿಮಾ ರಂಗದಲ್ಲಿ ಒಂದು ಭದ್ರ ಹಂತ ತಲುಪಲು ಈ ಇಬ್ಬರು ತಮ್ಮದೇ ದಾರಿಯಲ್ಲಿ ಶ್ರಮ ಪಟ್ಟಿದ್ದಾರೆ. ಹೀಗಾಗೆ ಇವರ ಸಿನಿಮಾಗಳನ್ನ ಇಷ್ಟ ಪಡುವ ದೊಡ್ಡದೊಂದು ಅಭಿಮಾನಿ ಬಳಗ ಹುಟ್ಟುಕೊಂಡಿದೆ. ಇನ್ನೂ ಈ ಇಬ್ಬರೇ ಒಂದು ಸಿನಿಮಾದಲ್ಲಿ ಮಾಡಿದ್ರೆ ಅದ್ಭುತವಾಗಿರುತ್ತೆ ಅಂತ ಕಾದ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಸ್ವೀಟ್​​ ನ್ಯೂಸ್​.

ಈ ಇಬ್ಬರು ಈಗ ಒಟ್ಟಿಗೆ ಸ್ಕ್ರೀನ್​​ಷೇರ್​​ ಮಾಡಿಕೊಳ್ಳಲು ತಯಾರಿಯಲ್ಲಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಈ ಜೋಡಿ ತಮಗೂ ಒಟ್ಟಿಗೆ ನಟಿಸುವ ಆಸೆ ಇದೆ ಅಂತ ಹೇಳಿದ್ದು ಉಂಟು. ಸದ್ಯಕ್ಕೀಗಾ ಆ ಕಾಲ ಕೂಡಿ ಬಂದಿದೆ. ಇನ್ನೂ ಈ ಇಬ್ಬರನ್ನು ಒಟ್ಟಿಗೆ ಸೆರೆ ಹಿಡಿಯಲು ಹೊರಟಿರುವುದು ಡೈರೆಕ್ಟರ್​​ ಪ್ರೀತಮ್​ ಗುಬ್ಬಿ. ಹಾಗಿದ್ರೆ ಈ ಮಲ್ಟಿಸ್ಟಾರರ್​​​ ಸಿನಿಮಾಗೆ ದಿಲ್ದಾರ್​​ ಪ್ರೊಡ್ಯುಸರ್​ ಯಾರಿರ ಬಹದು ಅನ್ನೋ ಪ್ರಶ್ನೆಯೊಂದು ನಿಮ್ಮಲಿದ್ರೆ, ಅದಕ್ಕೆ ಉತ್ತರವಿದೆ. ಸ್ವತಃ ಗಣೇಶ್​​ ಅವರೇ ಈ ಚಿತ್ರದ ನಿರ್ಮಾಣ ಮಾಡಲಿದ್ದು ಗೋಲ್ಡನ್​​ ಐ ಮೂವೀಸ್​​ ನಡಿ ಈ ಚಿತ್ರ ಸಿದ್ದವಾಗಲಿದೆ. ಸದ್ಯಕ್ಕೆ ದುನಿಯಾ ವಿಜಿ ಜಾನಿ ಜಾನಿ ಯಸ್​​ ಪಪ್ಪಾ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದ ನಿರ್ದೇಶಕರು ಕೂಡ ಪ್ರೀತಮ್​ ಗುಬ್ಬಿ ಅವರೇ. ಇನ್ನೂ ಗಣೇಶ್​​​ ಆರೇಂಜ್​​ ಚಿತ್ರದಲ್ಲಿ ಬ್ಯೂಸಿ. ಈ ಎರಡು ಸಿನಿಮಾಗಳು ಮುಗಿದ ಬಳಿಕ ಈ ಇಬ್ಬರ ಕಾಂಬಿನೇಷನ್​​ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ.

ಫಿಲ್ಮ್​​ ಬ್ಯೂರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *