ಸ್ವಚ್ಛ ಭಾರತ್​​ನಲ್ಲಿ ಮಹಿಳೆಯರ, ಯುವಕರ ಪಾತ್ರ ಗಮನಾರ್ಹ: ನರೇಂದ್ರ ಮೋದಿ

ದೆಹಲಿ: ಇಂದಿನಿಂದ ಗಾಂಧಿ ಜಯಂತಿವರೆಗೆ ಸ್ವಚ್ಛ ಭಾರತ ಕನಸು ನನಸಾಗಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸ್ವಚ್ಛತೆಯೇ ಸೇವೆ ಚಳವಳಿ ಬಾಪು ಅವರ ಸ್ವಚ್ಛ ಭಾರತ ಕನಸನ್ನು ಈಡೇರಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ವಿಡಿಯೋ ಸಂವಾದದ ಮೂಲಕ ಸ್ವಚ್ಛತೆಯೇ ಸೇವೆ ಯೋಜನೆಗೆ ಚಾಲನೆ ನೀಡಿದ ಅವರು, 4 ವರ್ಷಗಳ ಹಿಂದೆ ಆರಂಭವಾದ ಸ್ವಚ್ಛ ಭಾರತ್ ಮಿಷನ್ ಮಹತ್ವದ ಮೈಲುಗಲ್ಲು ತಲುಪಿದೆ. ಎಲ್ಲ ವರ್ಗದ ನಾಗರಿಕರು ಈ ಯೋಜನೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಇಂಡೋ ಟಿಬೇಟನ್ ಗಡಿ ಪಡೆಯ ಸಿಬ್ಬಂದಿಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ಐಟಿಬಿಪಿ ವಿಪತ್ತು ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದೆ. ಇದರೊಂದಿಗೆ ಸ್ವಚ್ಛ ಭಾರತ್ ಮಿಷನ್​​ಗಾಗಿ ಕೂಡ ಐಟಿಬಿಪಿ ದುಡಿದಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯಮಿ ರತನ್ ಟಾಟಾ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರೊಂದಿಗೆ ಮೋದಿ ಸಂವಾದ ನಡೆಸಿದರು. ಈ ವೇಳೆ ಪ್ರತಿಕ್ರಿಯಿಸಿದ ಬಚ್ಚನ್ 4 ವರ್ಷಗಳ ಹಿಂದೆ ಸ್ವಚ್ಛ ಭಾರತ ಮಿಷನ್​ಗೆ ಚಾಲನೆ ನೀಡಲಾಗಿತ್ತು. ದೇಶದ ನಾಗರಿಕನಾಗಿ ಸ್ವಚ್ಛ ಭಾರತ್ ಮಿಷನ್​ನಲ್ಲಿ ಭಾಗಿಯಾಗಿದ್ದೇನೆ. ಮುಂಬೈನ ಕಡಲ ತೀರ ಸ್ವಚ್ಛತೆಯಲ್ಲಿ ಭಾಗವಹಿಸಿದ್ದೇನೆ ಎಂದರು.

ಟಾಟಾ ಟ್ರಸ್ಟ್ ಸ್ವಚ್ಛ ಭಾರತ್ ಮಿಷನ್ ಅನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ ಮತ್ತು ಸ್ವಚ್ಛತೆ ವಿಷಯದಲ್ಲಿ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುವ ನಿಟ್ಟಿನಲ್ಲಿ ಈ ವರ್ಷ ಕೂಡ ನಮ್ಮ ಬೆಂಬಲ ಮುಂದುವರೆಯಲಿದೆ ಎಂದು ರತನ್ ಟಾಟಾ ಸಂವಾದದಲ್ಲಿ ಅಭಿಪ್ರಾಯಪಟ್ಟರು.

0

Leave a Reply

Your email address will not be published. Required fields are marked *