ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಕ್ರಿಸ್​ ವೋಕ್ಸ್​

ಲಾರ್ಡ್ಸ್​ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದ ಮೂರನೇ ದಿನ ಆಟ ಆರಂಭಿಸಿದ ಆತಿಥೇಯ ಇಂಗ್ಲೆಂಡ್​, ತಂಡ ಭರ್ಜರಿ ಆರಂಭ ಪಡೆಯುವ ಲೆಕ್ಕಾಚಾರದಿಂದ ಕಣಕ್ಕೆ ಇಳಿಯಿತು. ತಂಡ ತಮ್ಮ ಮೇಲೆ ಇಟ್ಟ ಜವಾಬ್ದಾರಿಯನ್ನು ಆರಂಭಿಕ ಆಟಗಾರರು, ಟೀಮ್​ ಇಂಡಿಯಾ ಬೌಲರ್ಸ್​​ಗಳನ್ನು ಕಾಡುವ ಇರಾದೆ ಹೊಂದಿದ್ದರು. ವಾತವರಣದ ಲಾಭ ಪಡೆದು ಬೌಲಿಂಗ್​ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದ, ಬ್ಲ್ಯೂ ಬಾಯ್ಸ್​ ರಣ ತಂತ್ರ ಫಲಿಸಿತು. ಆರಂಭಿಕ ಕಿಟನ್​ ಜೆನ್ನಿಂಗ್ಸ್​​​ ಉತ್ತಮ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದರು. ಆದ್ರೆ, ಸ್ವಿಂಗ್​ ಬೌಲರ್​​ ಮೊಹಮ್ಮದ್​ ಶಮಿ ಎಸೆತದಲ್ಲಿ LBW ಬಲೆಗೆ ಬಿದ್ದರು.

ಇನ್ನು ಟೂರ್ನಿಯಲ್ಲಿ ರನ್​ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ಅಲಿಸ್ಟಾರ್​ ಕುಕ್​​, ನಿನ್ನೆಯ ಪಂದ್ಯದಲ್ಲಿ ಇಶಾಂತ್​ ಶರ್ಮಾರು ಹಾಕಿದ ಕ್ಲಾಸ್​ ಎಸೆತಕ್ಕೆ ಔಟ್​ ಆದ್ರು. ಇಶಾಂತ್​ ಎಸೆದ ಚೆಂಡು ಕುಕ್​​ ಬ್ಯಾಟ್​​ಗೆ ಮುತ್ತಿಕ್ಕಿ ದಿನೇಶ್​ ಕಾರ್ತಿಕ್​​ ಕೈ ಸೇರಿತು. ಮತ್ತೊಮ್ಮೆ ಟೀಮ್​ ಇಂಡಿಯಾ ಪಾಳಯದಲ್ಲಿ ಮಂದಹಾಸ ಮೂಡಿತು. ಟೆಸ್ಟ್​​ ಪಾದಾರ್ಪಣೆ ಮಾಡಿದ ಓಲಿ ಪೋಪ್​ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟಿಂಗ್ ಮಾಡಿದ್ರು. ಸ್ಪಿಂಗ್​​ ಹಾಗೂ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪೋಪ್​​ ರನ್​ ಕಲೆ ಹಾಕುವತ್ತ ಚಿತ್ತ ನೆಟ್ಟರು. ಇವರಿಗೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಖೆಡ್ಡಾ ತೋಡುವಲ್ಲಿ ಸಫಲರಾದ್ರು. ಪಾಂಡ್ಯರ ಎಸೆತವನ್ನು ಗುರುತಿಸುವಲ್ಲಿ ಎಡವಿದ, ಪೋಪ್​​ 28 ರನ್​ಗಳಿಗೆ ಆಟ ಮುಗಿಸಿದ್ರು.

ಭೋಜನ ವಿರಾಮಕ್ಕೂ ಮುನ್ನ ಟೀಮ್​ ಇಂಡಿಯಾ ಅಭಿಮಾನಿಗಳ ಮುಖದಲ್ಲಿ ಮೊಹಮ್ಮದ್ ಶಮಿ ಮತ್ತೊಮ್ಮೆ ಮಂದಹಾಸ ಮೂಡಿಸಿದ್ರು. ಇಂಗ್ಲೆಂಡ್​ ತಂಡದ ಭರವಸೆಯ ಬ್ಯಾಟ್ಸ್​​ಮನ್​​ ಜೋ ರೂಟ್​​ರ ಆಟಕ್ಕೆ ಬ್ರೇಕ್​ ಹಾಕುವಲ್ಲಿ ಶಮಿ ಸಫಲರಾದ್ರು. ಚೆಂಡು ಬಿದ್ದ ಮೇಲೆ ಹೆಚ್ಚಾಗಿ ಪುಟಿಯದೇ ನೇರವಾಗಿ ರೂಟ್​​ ಪ್ಯಾಡ್​​ಗೆ ಬಡಿಯಿತು. ತಂಡದ ಉಪನಾಯಕ ಜೋಸ್​ ಬಟ್ಲರ್​​ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದ್ರು. 22 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 24 ರನ್​​ ಬಾರಿಸಿ, ಮೊಹೊಮ್ಮದ್​ ಶಮಿಗೆ ಮೂರನೇ ಬಲಿಯಾದ್ರು.

131 ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್​ ತಂಡದ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್​​ಮನ್​​ಗಳನ್ನು ಹತ್ತಿಕ್ಕುವ ವಿರಾಟ್​ ಕೊಹ್ಲಿ ಪ್ಲಾನ್​ ಕೈ ಕೊಟ್ಟಿತ್ತು. 6ನೇ ವಿಕೆಟ್​ಗೆ ಆಲ್​ರೌಂಡರ್​​ಗಳ ಆಟ ಮೇಳೈಸಿತ್ತು. ತಮ್ಮ ಕಾಲತ್ಮಕ ಆಟ ಆಡಿದ ಜಾನಿ ಬೇರ್​ಸ್ಟ್ರೋ- ಕ್ರಿಸ್​ ವೋಕ್ಸ್​ ಅಭಿಮಾನಿಗಳನ್ನು ರಂಜಿಸಿದ್ರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವಿರಾಟ್​ ಹಾಕಿಕೊಂಡ ಪ್ಲಾನ್ ಉಲ್ಟಾ ಆಯಿತು. ಪಂದ್ಯದ ಮೊದಲಾವಧಿಯಲ್ಲಿ ಮೇಲುಗೈ ಸಾಧಿಸಿದ್ದ ಟೀಮ್​ ಇಂಡಿಯಾ, ನಂತರ ಹಿನ್ನಡೆ ಅನುಭವಿಸಿತು.

ಈ ಜೋಡಿ ಟೀಮ್​ ಇಂಡಿಯಾದ ಸ್ಟಾರ್ ಬೌಲರ್​​ಗಳ ಹೆಡೆ ಮುರಿ ಕಟ್ಟಿತು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಸ್ಟಾರ್​ ಪ್ಲೇಯರ್ಸ್​​, ಇಂಗ್ಲೆಂಡ್​ ತಂಡದ ಬೃಹತ್ತ ಮೊತ್ತದ ಕನಸಿಗೆ ನೀರು ಹಾಕಿದ್ರು. ಆನ್​ ಸೈಡ್​ ಹಾಗೂ ಆಫ್​ ಸೈಡ್​​ನಲ್ಲಿ ರನ್​​ ಚಿತ್ತಾರ ಮೂಡಿಸಿದ ಜೋಡಿ, ಕೊಹ್ಲಿ ಮುಖದಲ್ಲಿ ಚಿಂತೆಯ ಗೆರೆಯನ್ನು ಮೂಡಿಸಿತು. ಈ ಜೋಡಿ ಸುಮಾರು 46 ಓವರ್​ ಬ್ಯಾಟ್ ಮಾಡಿ ತಂಡಕ್ಕೆ 189 ರನ್​ ಜೊತೆಯಾಟ ನೀಡಿತು.

ಇನ್ನು ಪಕ್ಕಾ ಬ್ಯಾಟ್ಸ್​​ಮನ್​ ರಿತಿ ಬ್ಯಾಟ್ ಮಾಡಿದ ಕ್ರಿಸ್​ ವೋಕ್ಸ್​​, ಸಿಕ್ಕ ಅವಕಾಶದಲ್ಲಿ ಅಬ್ಬರಿಸಿದ್ರು. ಲಾರ್ಡ್ಸ್​​ ಅಂಗಳದಲ್ಲಿ ಲೀಲಾಜಾಲವಾಗಿ ಬ್ಯಾಟ್ ಮಾಡಿದ ವೋಕ್ಸ್​​, ತಮ್ಮ ವೃತ್ತಿ ಜೀವನದಲ್ಲಿ ವಿಶಿಷ್ಠ ಮೈಲುಗಲ್ಲು ಮುಟ್ಟಿದ್ರು. ವೋಕ್ಸ್​​ 24ನೇ ಟೆಸ್ಟ್​​ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದ್ರು. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್​ 6 ವಿಕೆಟ್​ ನಷ್ಟಕ್ಕೆ 357 ರನ್​ ಕಲೆ ಹಾಕಿದೆ. ಶತಕ ವೀರ ವೋಕ್ಸ್​​ ಹಾಗೂ ಸ್ಯಾಮ್​ ಕರನ್​​ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಆತಿಥೇಯರು 250 ರನ್​​ ಮುನ್ನಡೆ ಸಾಧಿಸಿದ್ದಾರೆ.

ಇನ್ನು ಮೊದಲಾವಧಿಯಲ್ಲಿ ಅಬ್ಬರದ ಬೌಲಿಂಗ್ ನಡೆಸಿದ ಮೊಹಮ್ಮದ್ ಶಮಿ, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲ್ ಮಾಡಿದ್ರು. ಜೋ ರೂಟ್​ ಸೇರಿದಂತೆ ಅನುಭವಿ ಬ್ಯಾಟ್ಸ್​ಮನ್ ಗಳಿಗೆ ಖೆಡ್ಡಾ ತೋಡಿದ ಶಮಿ, ಮೂರನೇ ದಿನ ಮೂರು ವಿಕೆಟ್​ ಕಬಳಿಸಿದ್ರು. ಇನ್ನು ಹಾರ್ದಿಕ್ ಪಾಂಡ್ಯ 2 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಬೇಗನೆ ಇಂಗ್ಲೆಂಡ್​ ತಂಡವನ್ನು ಕಟ್ಟಿ ಹಾಕಿ, ಸಮಯೋಚಿತ ಬ್ಯಾಟಿಂಗ್ ನಡೆಸಿದ್ರೆ, ಮಾತ್ರ ಟೆಸ್ಟ್​​ ಪಂದ್ಯಕ್ಕೆ ಜೀವ ಬರಲಿದೆ.

0

Leave a Reply

Your email address will not be published. Required fields are marked *