ಭಾರತ ಪ್ರವಾಸವನ್ನು ಮುಂದೂಡಿದ ಎಲಾನ್ ಮಸ್ಕ್ : ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ: ಟೆಸ್ಲಾ ಸಿಇಓ

TESLA! CEO Elon Musk : ಸೋಮವಾರ ಎಲಾನ್ ಮಸ್ಕ್ ಮತ್ತು ಮೋದಿ ಭೇಟಿಯಾಗಬೇಕಿತ್ತು. ಆದರೆ ದಿಡೀರ್ ಆಗಿ ಈ ಭೇಟಿ ಮುಂದಕ್ಕೆ ಹೋಗಿದೆ.

ನವದೆಹಲಿ : ತೆಸ್ಲಾ ಸಿಇಓ ಎಲಾನ್ ಮಸ್ಕ್ ಭಾರತಕ್ಕೆ ನೀಡಬೇಕಿದ್ದ ಭೇಟಿಯನ್ನು ಮುಂದೂಡಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕಿತ್ತು. ಬಹುಮಟ್ಟಿಗೆ ಸೋಮವಾರ ಮಸ್ಕ್ ಮತ್ತು ಮೋದಿ ಭೇಟಿಯಾಗಬೇಕಿತ್ತು. ಆದರೆ ದಿಡೀರ್ ಆಗಿ ಈ ಭೇಟಿ ಮುಂದಕ್ಕೆ ಹೋಗಿದೆ.

ವಿಶ್ವದ ಮೂರನೆಯ ಅತಿ ದೊಡ್ಡ ಅಟೋಮೊಬೈಲ್ ಮಾರುಕಟ್ಟೆಯ ಪ್ರವೇಶ ಮತ್ತು ಬೆಳವಣಿಗೆ ಅವರ ಮೂಲ ಉದ್ದೇಶವಾಗಿತ್ತು. ಟೆಸ್ಲಾ ವಾಹನಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ಭಾರತ ಸರ್ಕಾರದ ಜೊತೆ ಅವರು ಸಮಾಲೋಚನೆ ನಡೆಸಬೇಕಿತ್ತು. ಆದರೆ ಇದೆಲ್ಲ ಈಗ ಮುಂದಕ್ಕೆ ಹೋಗಿದೆ.

ಈ ಭೇಟಿಗಾಗಿ ಪೂರ್ವಭಾವಿ ತಯಾರಿಯನ್ನು ಸರ್ಕಾರ ಮಾಡಿಕೊಂಡಿತ್ತು. ಅಟೋಮೊಬೈಲ್ ಇಂಡಸ್ಟ್ರ‍ಿ ಪ್ರಮುಖರ ಜೊತೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿತು. ಎವಿ ವಾಹನಗಳು ದೊಡ್ದ ಪ್ರಮಾಣದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಈ ಭೇಟಿ ಸಹಾಯ ಮಾಡುತ್ತದೆ ಎಂದು ನಂಬಲಾಗಿತ್ತು.

Author

error: