ಟೆನಿಸ್​​ ಲೋಕದ ಧೃವತಾರೆ ರೋಜರ್​​

ಆತ ಕ್ರಿಕೆಟ್​ ಲೋಕದ ಸೂಪರ್​ ಸ್ಟಾರ್​​​.. ಈತ ಟೆನಿಸ್​ ಲೋಕದ ಮೆಗಾ ಸ್ಟಾರ್​​.. ಇಬ್ಬರಿಗೂ ವಿಶ್ವದಾದಂತ್ಯ ಕೋಟ್ಯಾಂತರ ಅಭಿಮಾನಿಗಳು. ತಮ್ಮ ಆಕರ್ಷಕ ಆಟದ ಶೈಲಿಯಿಂದಲೇ ಎಲ್ಲರ ಮನ ಗೆದ್ದ ಪ್ಲೇಯರ್ಸ್​​. ಆದ್ರೆ, ರೋಜರ್​ ಫೆಡರರ್​ ಮತ್ತೆ ನಂಬರ್​​ ಶ್ರೇಯಾಂಕ ಪಡೆದು ಸುದ್ದಿಯಲ್ಲಿದ್ದಾರೆ.

ಸದ್ಯ ವಿಶ್ವ ಕ್ರೀಡಾಭಿಮಾನಿಗಳಿಗೆ ಸಂತಸದ ಮಾಸ.. ಒಂದು ಕಡೆ ಫಿಫಾ ವಿಶ್ವಕಪ್​.. ಇನ್ನೊಂದೆಡೆ ವಿಂಬಲ್ಡನ್​ ಗ್ರ್ಯಾನ್​ ಸ್ಲ್ಯಾಮ್​ ಟೂರ್ನಿ.. ಮತ್ತೊಂದೆಡೆ ಭಾರತ-ಇಂಗ್ಲೆಂಡ್​ ಫೈಟ್​​.. ಯಾವುದನ್ನು ನೋಡಬೇಕು ಯಾವುದನ್ನು ಬಿಡಬೇಕು. ಅನ್ನುವಷ್ಟರ ಮಟ್ಟಿಗೆ ಈ ಗೇಮ್​​ಗಳು ತಮ್ಮ ಪ್ರಭಾವ ಬೀರಿವೆ. ಒಂದು ವೇಳೆ ಪಂದ್ಯಗಳನ್ನು ಅಭಿಮಾನಿಗಳು ಮಿಸ್​ ಮಾಡ್ಕೊಂಡ್ರು ಹೈಲೇಟ್ಸ್​ ನೋಡೋದನ್ನು ಮಾತ್ರ ಮರೆಯೋದಿಲ್ಲ.

ಪ್ರಸಕ್ತ ವರ್ಷ ಭರ್ಜರಿ ಫಾರ್ಮ್​​ನಲ್ಲಿರುವ ಟೆನಿಸ್​ನ ದೈತ್ಯ ಆಟಗಾರ ರೋಜರ್​ ಫೆಡರರ್​. ದಾಖಲೆಗಳ ಗ್ರ್ಯಾಂಡ್​ ಸ್ಲ್ಯಾಮ್​​ಗಳ ಒಡೆಯ. ವಿಂಬಲ್ಡನ್​ ಅಂಗಳದಲ್ಲಿ ಫೆಡರರ್​ ರ್ಯಾಕೆಟ್​, ಈ  ಭಾರೀ ಸದ್ದು ಮಾಡ್ತಾ ಇದೆ. ಶರ ವೇಗದ ಸರ್ವ್​ ಹಾಗೂ ಗ್ಯಾಪ್​ ಶಾಟ್​ಗಳ ಮೂಲಕ ಗಮನ ಸೆಳೆದಿರುವ ಸ್ವಿಸ್​ ಪ್ಲೇಯರ್​, ಕ್ರಿಕೆಟ್​ ಅಭಿಮಾನಿಗಳನ್ನ ತನ್ನತ್ತ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ರೋಜರ್ ಫೆಡರರ್​ ಸದ್ಯ ವಿಂಬಲ್ಡನ್​ ಟೂರ್ನಿಯ ಪಂದ್ಯದಲ್ಲಿ​ ಕ್ಲಾಸ್​ ಆಟ ಆಡಿ ಅಭಿಮಾನಿಗಳನ್ನು ರಂಜಿಸಿದ್ರು. ಈ ವೇಳೆ ಆ್ಯಂಡಿಯಾನೋ ಮನಾರಿನೊ ಫೌಲ್​​ ಮಾಡಿದ್ರು. ಈ ಚೆಂಡನ್ನು ಎದುರಿಸುವ ವೇಳೆ ರೋಜರ್​ ಫೆಡರರ್​​, ಆಟದ ವೈಖರಿ ಕ್ರಿಕೆಟ್​ ಅಭಿಮಾನಿಗಳನ್ನು ರಂಜಿಸಿದೆ. ಫಾರ್ವಡ್​ ಡಿಫೆನ್ಸ್ ಆಟದ ಮಾದರಿಯಲ್ಲೇ ಡಿಫೆನ್ಸ್​ ಮಾಡಿದ್ದಾರೆ.

ಈ ವಿಡಿಯೋವನ್ನು ವಿಂಬಲ್ಡನ್​ ತನ್ನ ಅಧಿಕೃತ ವೆಬ್​​ಸೈಟ್​​ನಲ್ಲಿ ಅಪ್​ಲೋಡ್​ ಮಾಡಿದೆ. ಅಲ್ಲದೆ ಫಾರ್ವಡ್​ ಡಿಫೆನ್ಸ್ ಶಾಟ್​ ಎಂದು ತಿಳಿಸಿದೆ.ಇದಕ್ಕೆ ಪ್ರತಿಕ್ರಿಯೆ ಯಾಗಿ ಐಸಿಸಿ ಒಂದು ಪೋಸ್ಟ್​ ಅಪ್​ಲೋಡ್ ಮಾಡಿದೆ. ಇದರ ಅನುಸಾರ ರೋಜರ್​ ಫೆಡರರ್​ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಅಲಂಕರಿಸಿದ್ದಾರೆ.ಅಂದಹಾಗೆ ಈ ಟ್ವೀಟ್ ನೋಡಿ ನೀವು ವಿಚಲಿತರಾಗುವ ಅವಶ್ಯಕತೆ ಇಲ್ಲ. ಇದು ಜಸ್ಟ್​ ಫನ್​..

0

Leave a Reply

Your email address will not be published. Required fields are marked *