ಹೆದರಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಟೆಕ್ಕಿ

ಬೆಂಗಳೂರು: ಆತ ತಾನು ಸಾಯ್ತಿನಿ ಅಂತಾ ಹೇಳಿ ಹೆದರಿಸಿ ದುಡ್ಡುಪಡ್ಕೋಳ್ಳುವ ಅನ್ಕೋಂಡ. ಆದ್ರೆ ಅದೇ ಅವನಿಗೆ ಸಾವಗಿ ಪರಿಣಾಮಿಸುತ್ತೆ ಅಂತಾ ಆತ ತಿಳ್ಕೋಂಡಿರಲಿಲ್ಲ. ರಿತೇಶ್‌ ಬೆಂಗಳೂರಿನ ಜೆ.ಪಿ.ನಗರದ 2ನೇ ಹಂತದ ನಿವಾಸಿ. ಈತ ತಾನು ತನ್ನ ಹೆಂಡತಿ ಮಗನ ಜೊತೆ ವಾಸವಿದ್ದ. ಮಗನ ವಿದ್ಯಾಭ್ಯಾಸಕ್ಕೋಸ್ಕರ ಸಾಲ ಮಾಡಿ ಆದಿತ್ಯ ಟುಟೋರಿಯಲ್ಸ್‌ಗೆ ಮೊದಲೆ ಎರಡೂವರೆ ಲಕ್ಷ ಡೊನೇಷನ್‌ ನೀಡಿ ಮಗನನ್ನ ಸೇರಿಸಿದ್ದರು. ಆದ್ರೆ ಇತ್ತಿಚ್ಚೇಗೆ ಮಗನನ್ನ ಟುಟೋರಿಯಲ್ಸ್‌ನಿಂದ ಬಿಡಿಸಿ ಆತನಿಗೆ ಮನೆಯಲ್ಲೇ ವಿದ್ಯಾಭ್ಯಾಸ ನೀಡ್ತಿದ್ರು. ಈ ಹಿನ್ನೆಲೆಯಲ್ಲಿ ಡೊನೇಷನ್‌ನ ಅರ್ಧ ಹಣ ಒಂದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ರು. ಆದ್ರೆ ಆದಿತ್ಯಾ ಟುಟೋರಿಯಲ್ಸ್ ಮಾಲೀಕ ಹಣ ನೀಡದೇ ರಿತೇಶ್​​​ಗೆ ಸತಾಯಿಸ್ತಿದ್ದ.

ಪ್ರತಿ ದಿನ ಟುಟೋರಿಯಲ್ಸ್ ಹತ್ತಿರ ಹೋಗಿ ಹಣ ಕೇಳಿ ಬೆಸತ್ತ ರಿತೇಶ್ ಆತ್ಮಹತ್ಯೆ ಮಾಡೋರೀತಿ ನಾಟಕವಾಡಿದ್ರೆ ಹಣ ಕೊಡಬಹುದು ಅಂತಾ ನಂಬ್ಕೋಂಡ್ ಜೆ.ಪಿ. ನಗರ ಬಳಿ ಇರುವ ಆದಿತ್ಯ ಟುಟೋರಿಯಲ್ಸ್ ಎದುರುಗಡೆ ಪೆಟ್ರೋಲ್ ಸುರಿದುಕೊಂಡು ಹೆದರಿಸಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಕೈಯಲ್ಲಿ ಬೆಂಕಿ ಪೊಟ್ಟಣ ಹಚ್ಚಿದ ಕ್ಷಣವೇ ಬೆಂಕಿ ದೇಹಕ್ಕೆ ವ್ಯಾಪಿಸಿ ರಿತೇಶ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾನೆ. ತಕ್ಷಣ ಟುಟೋರಿಯಲ್ಸ್ ಮಾಲೀಕ ಜೆ.ಪಿ ನಗರ ಪೊಲೀಸರಿಗೆ ಮಾಹಿತಿ ರವಾನಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಿತೇಶ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇನ್ನು ಜೆ.ಪಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಪ್ರಕರಣದಲ್ಲಿ ಯಾರ ಪಾತ್ರ ಪ್ರಮುಖವಾದದ್ದು ಅನ್ನೋದರ ಬಗ್ಗೆ ತನಿಖೆ ಮುಂದೆವರೆಸಿದ್ದಾರೆ. ಒಟ್ಟಾರೆ ಹೆದರಿಸೋಕೆ ಅಂತಾ ಹೋಗಿ ಈ ರೀತಿ ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಭವ್ಯ ಶಿಬರೂರು ಕ್ರೈಂಬ್ಯೂರೋ ಸುದ್ದಿ ಟಿವಿ..

0

Leave a Reply

Your email address will not be published. Required fields are marked *