ಬಾಹುಬಲಿ-2 ಚಿತ್ರಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ.

ಸಾಕಷ್ಟು ನೀರಿಕ್ಷೆ ಮೂಡಿಸಿದ್ದ ಬಾಹುಬಲಿ-2 ಚಿತ್ರಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಅಂತೂ ನಿರ್ದೇಶಕ ಎಸ್.ಎಸ್.ರಾಜಮೌಳಿ ಯ 5 ವರ್ಷಗಳ ಕನಸಿನ ಕೂಸು ಬಾಹುಬಲಿ – ದಿ ಕನ್ ಕ್ಲೂಶನ್ ಚಿತ್ರ ಕಳೆದ ರಾತ್ರಿ ಸಿನಿ ರಸಿಕರನ್ನ ಮೆಚ್ಚಿಸಿದೆ.. ನಗರದ ಎಸ್ ಪಿ ರಸ್ತೆಯಲ್ಲಿರುವ ಶಾರದಾ ಚಿತ್ರ ಮಂದಿರದಲ್ಲಿ ಮಧ್ಯ ರ್ರಾತ್ರಿ 12:30ಕ್ಕೆ ಸಿನಿಮಾ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ತುಂಬಿತುಳುಕುತಿದ್ರು.. ಬಾಹುಬಲಿಯಲ್ಲಿ ಕೂತುಹಲ ಮೂಡಿಸಿದ್ದ ಮುಕ್ತಾಯದ ಅಂತವನ್ನ ಈಗ ಬಾಹುಬಲಿ-2 ಚಿತ್ರದಲ್ಲಿ ಪೂರ್ತಿಗೊಳಿಸಲಾಗಿದೆ.. ಸಿನಿ ರಸಿಕರಿಗೆ ಚಿತ್ರವನ್ನು ಬಹುಬೇಗ ಕಣ್ತುಂಬಿಕೊಳ್ಳಬೇಕು ಎಂಬ ಕಾತುರದಿಂದ ಕಾಯುತ್ತಿದ್ದವರಿಗೆ ರಾಜಮೌಳಿ ತಂಡದ ಪ್ರತೀ ಪಾತ್ರದಾರಿಗಳು ಅವರ ಪ್ರತಿಭೆಯನ್ನ ಮೆರೆದಿದ್ದಾರೆ.. ಪಾತ್ರಕ್ಕೆ ತಕ್ಕಂತೆ ಎಲ್ಲಾ ನಟ ನಟಿಯರು ಸಖತ್ ನಟನೆ ಮಾಡಿದ್ದಾರೆ.. ಪ್ರೇಕ್ಷಕರಿಗೆ ಎಲ್ಲೂ ಒಂದು ಕ್ಷಣ ಬೇಸರ ಮೂಡಿಸದಂತೆ ಚಿತ್ರವನ್ನ ನಿರ್ದೇಶನ ಮಾಡಲಾಗಿದ್ದು, ಪ್ರೇಕ್ಷಕರು ಕೂಡಾ ಇದಕ್ಕೆ ಸಖತ್ ರೆಸ್ಪಾನ್ಸ್ ಮಾಡಿದ್ದು, ಬಾಹುಬಲಿ-2 ದಾಖಲೆ ಬರೆಯೋದ್ರಲ್ಲಿ ಅನುಮಾನವೇ ಇಲ್ಲ ಎನ್ನಲಾಗಿದೆ.

0

Leave a Reply

Your email address will not be published. Required fields are marked *