ಸ್ಟೈಲ್, ಫ್ಯಾಷನೇಬಲ್ ಜಾಕೇಟ್​ ರೈನ್​ ಕೋಟ್​ಗಳು ಸಿಲಿಕಾನ್ ಸಿಟಿ ಮಾರ್ಕೆಟ್​ಗೆ ಲಗ್ಗೆ ಇಟ್ಟಿವೆ..

ಉದ್ಯಾನನಗರಿಯಲ್ಲೀಗ ಮಳೆಗಾಲದ ಕಾರುಬಾರು ಶುರುವಾಗಿದೆ. ಜೊತೆಗೆ ದ್ವಿಚಕ್ರ ವಾಹನಗಳ ಸವಾರರಿಗೆ ಚಿಂತೆಯಾಗಿದೆ.. ಅವ್ರ ಚಿಂತೆಗೆ ಬ್ರೇಕ್​ ಎಂಬಂತೆ ವೆರೈಟಿ ವೆರೈಟಿ ಜಾಕೆಟ್​, ರೈನ್​ ಕೋಟ್​ಗಲು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ..ಸಿಲಿಕಾನ್ ಸಿಟಿಗೆ ಮಳೆಗಾಲದ  ಆಗಮನವಾಗಿದ್ದು, ಮಾಡ್ ಆಗಿ ಮಿಂಚುತ್ತಿದ್ದ ಮೆಟ್ರೋ ಮಂದಿ  ಚಿಂತೆ ಶುರುವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಡ್ರೆಸ್​ಗಳ ಹುಡುಕಾಟ ಆರಂಭವಾಗಿದೆ.. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಇತ್ತೀಚಿನ ದಿನಗಳಲ್ಲಿ ಮಳೆಗಾಲಕ್ಕೆ  ಒಂದಿಷ್ಟು ಸ್ಟೈಲ್, ಫ್ಯಾಷನೇಬಲ್  ಜಾಕೇಟ್​ ರೈನ್​ ಕೋಟ್​ಗಳು ಮಾರ್ಕೆಟ್​ಗೆ ಬಂದಿವೆ.

ಇನ್ನೂ ಮಕ್ಕಳನ್ನು ಅಟ್ರಾಕ್ಟ್​ ಮಾಡುವ ಮಿಕ್ಕಿಮೌಸ್​, ಬಾರ್ಬಿ​, ಮಿಕ್ಕಿ ಡಾನಲ್​ ಮುಂತಾದ ರೈನ್​ ಕೋಟ್​ಗಳು ಒಂಂದಡೆಯಾದ್ರೆ  ಇನ್ನೊಂದೆಡೆ ಆರೆಂಜ್​, ಪಿಂಕ್​, ಪರ್ಪಲ್​​ ಕಲರ್​ನಲ್ಲಿ ಮಿಂಚ್ತಿರೋ  ಟೂ ಇನ್​ ಓನ್​ ಯೂಸ್​ ಜಾಕೆಟ್​ಗಳು.. ಇವಷ್ಟೇ ಅಲ್ಲದೇ ದ್ವಿಚಕ್ರ ವಾಹನ ಸವಾರರ ಸೇಫ್ಟಿಗಾಗಿ ರಿಪ್ಲೇಕ್ಟರ್​ ಜಾಕೆಟ್​ಗಳು ಎಂಟ್ರಿ ಕೊಟ್ಟಿವೆ. 

ಇನ್ನೂ ಇವು ನಗರದ ಕಮರ್ಷಿಯಲ್ ಸ್ಟ್ರೀಟ್​ನ ವೆಸ್ಟರ್ನ್​ ಸ್ಟೋರ್​​ನಲ್ಲಿ ಲಭ್ಯವಿದ್ದು ಚಿಕ್ಕವರಿಂದ ಹಿಡಿದು ವಯಸ್ಕರ ವರೆಗಿನ ರೈನ್​ ಕೋಟ್​ಗಳನ್ನು ಕಾಣಬಹದು.. ದರ ಕೂಡ 700 ರಿಂದ 5000ದವರೆಗೆ ಇದೆ. ಮಕ್ಕಳಿಗಾಗಿ ಇರೋ ಮಿಕ್ಕಿ ಮೌಸ್​ ರೈನ್​ಕೋಟ್​ಗಳು ಹೆಚ್ಚು ಮಾರಾಟವಾಗ್ತಿವೆ ಅಂತಾರೆ ವ್ಯಾಪಾರಿಗಳು. ಹಾಗಾದ್ರೆ  ಮತ್ಯಾಕೆ ತಡ ಮಳೆಗಾಲದಲ್ಲಿ  ರೈನ್​ನಿಂದ ರಕ್ಷಿಸಿಕೊಂಡು  ಜೊತೆಗೆ ಎಲ್ರೂ ಮುಂದೆ ಸ್ಟೈಲೀಸ್​ ಡಿಫರೆಂಟ್​  ಆಗಿ ಮಿಂಚಬೇಕು ಅನ್ನೋರು ಈ  ಶಾಪ್ಗೆ ಭೇಟಿ ನೀಡಿ  ಡ್ರೆಸ್ ಪರ್ಚೇಸ್ ಮಾಡಿ..

ವೀಣಾ ಸಿದ್ದಾಪುರ, ಸುದ್ದಿ ಟಿವಿ ,ಬೆಂಗಳೂರು.

 

 

 

0

Leave a Reply

Your email address will not be published. Required fields are marked *