ಕದನವಿರಾಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದ ಭಾರತ

ನವದೆಹಲಿ: ಕದನವಿರಾಮ ಉಲ್ಲಂಘನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಸೇನಾ ಕಾರ್ಯಾಚರಣೆಯ ಡಿಜಿ ಜನರಲ್ ಎ ಕೆ ಭಟ್ ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ. ಇಂದು ಪಾಕ್ ಮತ್ತು ಭಾರತದ ಡಿಜಿಎಂಒಗಳ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಪಾಕ್ ಡಿಜಿಎಂಒ ಸಾಹಿರ್ ಶಂಶದ್ ಮಿರ್ಜಾ ಮತ್ತು ಭಾರತದ ಡಿಜೆಎಂಒ ಎ ಕೆ ಭಟ್ ಹಾಜರಿದ್ದರು.

ಈ ವೇಳೆ ಅಂತರರಾಷ್ಟ್ರೀಯ ಗಡಿರೇಖೆಯನ್ನು ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸದಂತೆ ಪಾಕಿಸ್ತಾನಕ್ಕೆ ಭಾರತ ತಾಕೀತು ಮಾಡಿದೆ. ದೇಶದಲ್ಲಿ ಶಾಂತಿಯನ್ನು ಕಾಪಾಡಲು ಪಾಕ್ ಸೇನೆ ಉದ್ದೇಶಿತ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಪಾಕ್ ಸೇನೆ ಗಡಿ ನುಸುಳುವಿಕೆ, ಗುಂಡಿನ ದಾಳಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಭಾರತ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ ಎಂದು ಭಟ್ ಹೇಳಿಕೆ ನೀಡಿದ್ದಾರೆ.

ಗಡಿಯಲ್ಲಿ ಭಾರತೀಯ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ಪಾಕಿಸ್ತಾನಕ್ಕೆ ಈ ವೇಳೆ ಭಾರತೀಯ ಸೇನಾಧಿಕಾರಿಗಳು ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಕಳೆದ ಕೆಲವು ತಿಂಗಳಿನಿಂದ ಪಾಕ್ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ವಿಷಯವನ್ನು ಕೂಡ ಪ್ರಸ್ತಾಪಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಪಾಕ್ ಪಡೆಗಳು ಭಾರತದ ಮೇಲೆ ಭಾರೀ ಪ್ರಮಾಣದಲ್ಲಿ ಗುಂಡು ಮತ್ತು ಕ್ಷಿಪಣಿಗಳ ದಾಳಿ ನಡೆಸುತ್ತಿವೆ. ಇದರಿಂದಾಗಿ ವಿಶೇಷವಾಗಿ ಕಾಶ್ಮೀರದ ರಾಜೌರಿ ಮೊದಲಾದ ಜಿಲ್ಲೆಗಳಲ್ಲಿ ಜನಜೀನವ ಅಸ್ತವ್ಯಸ್ತವಾಗಿರುವುದಲ್ಲದೇ, ಅಪಾರ ಜೀವ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸುತ್ತಿದೆ ಈ ಹಿನ್ನೆಲೆಯಲ್ಲಿ ಡಿಜಿಎಂಒಗಳ ಸಭೆಯನ್ನು ನಡೆಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *