ಟೀಮ್ ಇಂಡಿಯಾ ಅಬ್ಬರ ಕಂಡು ಕಾಂಗರೂಗಳಿಗೆ ನಡುಕ..

ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮೊದಲೇ ಕಾಂಗರೂಗಳಿಗೆ ದಿಗಿಲು ಶುರುವಾಗಿದೆ. ಕೊಹ್ಲಿ ಪಡೆಯ ಬಲದ ಕುರಿತು ಆಸೀಸ್ ನಾಯಕ ಭಯ ವ್ಯಕ್ತಪಡಿಸಿದ್ದಾರೆ.. ಅಲ್ಲದೆ ತಾವು ಏನು ಮಾಡಿದ್ರಷ್ಟೇ ಜಯ ಸಾಧಿಸಬಹುದು ಎಂಬುದನ್ನ ತಿಳಿಸಿದ್ದಾರೆ.ಸೆಪ್ಟೆಂಬರ್​ 17ರಿಂದ ಭಾರತ-ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಅಲ್ಲದೆ ಅದಕ್ಕೂ ಮೊದಲು ಇಂದು ಚೆನ್ನೈನಲ್ಲಿ ಪ್ರೆಸಿಡೆಂಟ್ ಇಲೆವನ್ ವಿರುದ್ಧ ಕಾಂಗರೂಗಳು ಅಭ್ಯಾಸ ಪಂದ್ಯವನ್ನಾಡಲಿದ್ದಾರೆ. ಇಷ್ಟಾದ್ರೂ ಕಾಂಗರೂಗಳು ಟೂರ್ನಿ ಶುರುವಾಗುವ ಮೊದಲೇ ಭಯಪಟ್ಟಂತಿದೆ. ಇದಕ್ಕೆ ಉದಾಹರಣೆ.. ಆಸ್ಟ್ರೇಲಿಯಾ ತಂಡದ ನಾಯಕ ಸ್ವೀವನ್​ ಸ್ಮಿತ್​ನ ಹೇಳಿಕೆ.

ಭಾರತದಲ್ಲಿ ಸ್ಪಿನ್​ ದಾಳಿ ಎದುರಿಸಲು ಯಾವುದೇ ಭಯವಿಲ್ಲ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಸ್ಮಿತ್​.. ಟೀಮ್ ಇಂಡಿಯಾದ ಪರ್ಫಾಮೆನ್ಸ್ ಹಾಗೂ ಬಲದ ಕುರಿತು ಎಚ್ಚರಿಕೆಯಿಂದ ಆಟವಾಡಬೇಕಾಗುತ್ತದೆ ಎಂದಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಟೀಮ್ ಇಂಡಿಯಾ ನಾಯಕನ ಕುರಿತು ಭಯ ವ್ಯಕ್ತಪಡಿಸಿದ್ದಾರೆ. ವಿಶ್ವ ಕ್ರಿಕೆಟ್​​ನಲ್ಲಿ ಅದ್ಭುತ ಫಾರ್ಮ್​ನಲ್ಲಿರೋ ವಿರಾಟ್​​​ ಕುರಿತು ಇಡೀ ಕಾಂಗರೂ ತಂಡವೇ ಭಯಗೊಂಡಿದೆ. ಇತ್ತೀಚೆಗಷ್ಟೇ ಲಂಕಾದಲ್ಲಿ ದಾಖಲೆಯ 30ನೇ ಏಕದಿನ ಶತಕ ಸಿಡಿಸಿದ ಕೊಹ್ಲಿ.. ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಂತೂ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಅದ್ರಲ್ಲೂ ಒನ್​ಡೇ ಫಾರ್ಮೆಟ್​ನಲ್ಲಂತೂ ಸದ್ಯ ವಿರಾಟ್​ಗೆ ಸರಿಸಮನಾಗಿ ನಿಲ್ಲುವ ಬ್ಯಾಟ್ಸ್​ಮನ್​​​ ಇಲ್ಲ. ಅಷ್ಟರ ಮಟ್ಟಿಗೆ ಕೊಹ್ಲಿ ರನ್​​ ಮಶೀನ್​​ನಂತೆ ಬಿಂಬಿತವಾಗಿದ್ದಾರೆ.

ಇನ್ನು ಕೊಹ್ಲಿಯ ಅದ್ಭುತ ಫಾರ್ಮ್​​ ಕಂಡಿರೋ ಸ್ಮಿತ್​ .. ವಿರಾಟ್​​ನನ್ನ ಯಾವುದೇ ಕಾರಣಕ್ಕೂ ಕೆಣಕಬಾರದು ಎಂಬುದೇ ನಮ್ಮ ದೊಡ್ಡ ಯೋಜನೆಯಾಗಿದೆ ಎಂದಿದ್ದಾರೆ. ಕೊಹ್ಲಿ ಸದ್ಯ ವಿಶ್ವಶ್ರೇಷ್ಟ ಬ್ಯಾಟ್ಸ್​ಮನ್​ ಆಗಿದ್ದು, ಸರಣಿ ಮುಗಿಯೋವರೆಗೂ ಅವರನ್ನ ಕೆಣಕದೆ ಶಾಂತಿಯಿಂದಿರಿಸಬೇಕು. ಹಾಗಿದ್ರೆ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದಿದ್ದಾರೆ. ಒಟ್ಟಾರೆ ಟೂರ್ನಿ ಆರಂಭಕ್ಕೂ ಮೊದಲೇ ಕಾಂಗರೂಗಳು ಟೀಮ್ ಇಂಡಿಯಾ ತಾಕತ್ತನ್ನ ಕಂಡು ಭಯ ಪಟ್ಟಿರೋದಂತು ನಿಜ. ಇದೇ ವರ್ಷದ ಆರಂಭದಲ್ಲಷ್ಟೆ ಭಾರತದ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನಾಡಿದ್ದ ಕಾಂಗರೂಗಳು ಮೊದಲ ಪಂದ್ಯ ಗೆದ್ರೂ ಸಹ ಟೀಮ್ ಇಂಡಿಯಾ ವಿರುದ್ಧ ಸರಣಿ ಸೋತು ತವರಿಗೆ ಮರಳಿದ್ರು.. ಹೀಗಾಗಿ ಹೇಗಾದ್ರೂ ಮಾಡಿ ಭಾರತ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.
ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *