ದಾಖಲೆಗಳಿದ್ದರೆ ಕೋರ್ಟ್​ಗೆ ಹೋಗಿ: ನಿತೀಶ್ ಕುಮಾರ್

ಪಾಟ್ನಾ: ಸೃಜನ್ ಹಗರಣದಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಟ್ಟು ಕೋರ್ಟ್​​ಗೆ ಹೋಗಿ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಲಾಲು ಪ್ರಸಾದ್ ಯಾದವ್ ಅವರಿಗೆ ಸಲಹೆ ನೀಡಿದ್ದಾರೆ. ಲಾಲು ಪ್ರಸಾದ್ ಯಾದವ್ ಬಳಿ ತಮ್ಮ ವಿರುದ್ಧ ಸಾಕ್ಷಿಗಳಿದ್ದಲ್ಲಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಿ ಎಂದರು. ನನ್ನ ವಿರುದ್ಧ ಸಾಕ್ಷಿಗಳಿದ್ದಲ್ಲಿ ನ್ಯಾಯಾಲಯದ ಬಾಗಿಲು ಬಡಿದು ನ್ಯಾಯ ಪಡೆಯಲಿ ಎಂದು ಕೂಡ ಅವರು ಹೇಳಿದರು. ದಾಖಲೆಗಳಿದ್ದಲ್ಲಿ ಮಾಧ್ಯಮಗಳ ಮುಂದೆ ಹೋಗುವುದರ ಬದಲಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್​​ಗೆ ಹೋಗಲಿ ಎಂದರು.

ಸಿಬಿಐ ಆಗಸ್ಟ್ 26ರಂದು ಇದೇ ಹಗರಣಕ್ಕೆ ಸಂಬಂಧಿಸಿದಂತೆ ಭಾಗಲ್ಪುರ ಮೂಲದ ಎನ್​​ಜಿಒ ಸೃಜನ್ ಮಹಿಳಾ ವಿಕಾಸ ಸಮಿತಿ, ಬ್ಯಾಂಕ್ ಆಫ್ ಬರೋಡಾದ ನಿರ್ದೇಶಕ, ಬ್ಯಾಂಕ್ ಆಫ್ ಬರೋಡಾದ ಮಾಜಿ ನಿರ್ದೇಶಕ, ಭೂಸ್ವಾಧೀನ ಕಚೇರಿಯ ಸಹಾಯಕ ಗುಮಾಸ್ತನ ವಿರುದ್ಧ ಎಫ್​​ಐಆರ್ ದಾಖಲಿಸಿದೆ.

ಈ ಹಿಂದಿನ ಜೆಡಿಯು – ಎನ್​ಡಿಎ ಆಡಳಿತದ ಅವಧಿಯಲ್ಲಿ ನಿತೀಶ್ ಕುಮಾರ್ ಸಿಎಂ ಮತ್ತು ಸುಷಿಲ್ ಮೋದಿ ಉಪ ಮುಖ್ಯಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆ ಮತ್ತು ಹಣ ವರ್ಗಾವಣೆ ಆರೋಪ ಎದುರಾಗಿತ್ತು. ಈ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *