ಇಂಥ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದು ನಾನು ಯೋಚಿಸಿರಲಿಲ್ಲ: ಮಣಿಶಂಕರ್ ಅಯ್ಯರ್

ದೆಹಲಿ: ಮುಸಲ್ಮಾನರನ್ನು ಪಿಳ್ಳೆಗಳು ಎಂದು ಪರಿಗಣಿಸಬಹುದು ಎಂದು ನನಗೆ 2014ರವರೆಗೆ ಗೊತ್ತಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಒಬ್ಬ ಸಿಎಂ ಹೀಗೆ ಭಾವಿಸಿದ್ದರು. 2002ರಲ್ಲಿ ಗುಜರಾತ್​ನಲ್ಲಿ ಮಸ್ಲಿಮರು ಬಲಿಯಾದ ಕುರಿತು ಒಮ್ಮೆ ಅವರನ್ನು ಪ್ರಶ್ನಿಸಿದಾಗ, ವಾಹನದ ಕೆಳಗೆ ಒಂದು ಪಿಳ್ಳೆ ಬಂದರೆ, ಮನಸಿಗೆ ಚೂರು ನೋವಾಗುತ್ತದೆ ಎಂದಿದ್ದರು ಎಂದು ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

24 ದಿನಗಳ ಕಾಲ ಮುಸಲ್ಮಾನ ನಿರಾಶ್ರಿತ ಶಿಬಿರಕ್ಕೆ ಇವರು ಭೇಟಿ ನೀಡಿರಲಿಲ್ಲ. ಅಂದಿನ ಪ್ರಧಾನಿ ವಾಜಪೇಯಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಅಹಮದಾಬಾದ್​​ನ ಮಸೀದಿಗೆ ಅವರು ಬಲವಂತವಾಗಿ ಭೇಟಿ ನೀಡಿದರು. ಇಂಥ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದು ನಾನು ಯೋಚಿಸಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

0

Leave a Reply

Your email address will not be published. Required fields are marked *