ತಾಯಿಯಿಲ್ಲದೆ ನಾಗರ ಹಾವಿನ ಮರಿಗಳ ಜನನ…

ತಾಯಿಯ ಆಶ್ರಯವಿಲ್ಲದೇ ಎಂಟು ನಾಗರ ಹಾವಿನ ಮರಿಗಳು ಜನ್ಮ ಪಡೆದುಕೊಂಡಿರುವ ಅಪರೂಪದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಉರಗ ತಜ್ಞ ಸ್ನೇಕ್ ನರೇಶ್ ಚಿಕ್ಕಮಗಳೂರು ಸಮೀಪದ ಧುಮ್ಗೆರೆ ಗ್ರಾಮದ ಲಕ್ಮಣ ಎಂಬುವರ  ಜಮೀನೊಂದರಲ್ಲಿದ್ದ ಹಾವನ್ನು ರಕ್ಷಿಸಿದ್ರು. ಈ ವೇಳೆ ಅವರಿಗೆ ಅದೇ ನಾಗರಹಾವಿನ ಎಂಟು ಮೊಟ್ಟೆಗಳು ದೊರೆತಿದ್ದವು. ನಾಗರಹಾವನ್ನು ಕಾಡಿಗೆ ಬಿಟ್ಟ ಸ್ನೇಕ್ ನರೇಶ್ ಎಂಟು ಮೊಟ್ಟೆಗಳನ್ನು ತಂದು ಬಾಟಲ್ ಒಂದರಲ್ಲಿ ಮರಳು ಹಾಗೂ ಭತ್ತದ ಹುಲ್ಲಿನ ಜೊತೆ ಹಾಕಿ ಕೃತಕವಾಗಿ ಕಾವು ನೀಡಿದ್ರು. ನಂತರ 8 ದಿನಗಳ ಬಳಿಕ ಮೊಟ್ಟೆಯಿಂದ ಎಂಟು ನಾಗರಹಾವಿನ ಮರಿಗಳು ಹೊರ ಬಂದಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

0

Leave a Reply

Your email address will not be published. Required fields are marked *