ಸೀತಾರಾಂ ಯೆಚೂರಿ ಮೇಲೆ ದಾಳಿ ನಡೆಸಿದ ಹಿಂದೂ ಸೇನೆ ಕಾರ್ಯಕರ್ತ

ನವದೆಹಲಿ: ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸುದ್ದಿ ಗೋಷ್ಠಿ ನಡೆಸುತ್ತಿದ್ದ ವೇಳೆ, ದೆಹಲಿಯಲ್ಲಿ ಹಿಂದೂ ಸೇನೆಯ ಕಾರ್ಯಕರ್ತ ಹಲ್ಲೆ ನಡೆಸಿದ್ದಾನೆ. ಈ ವೇಳೆ ಯೆಚೂರಿಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆದ ಕೆಲವೇ ನಿಮಿಷಗಳ ನಂತರ ಟ್ವೀಟ್ ಮಾಡಿರುವ ಯೆಚೂರಿ, ಸಂಘಪರಿವಾರದ ಗೂಂಡಾಗಿರಿಗೆ ನಾವು ಬಲಿಯಾಗುವುದಿಲ್ಲ. ಅಲ್ಲದೇ, ಇವರ ಗೂಂಡಾಗಿರಿಯಿಂದ ನಮ್ಮನ್ನು ಸುಮ್ಮನಾಗಿಸಲಾಗುವುದಿಲ್ಲ. ಇದು ಭಾರತದ ಆತ್ಮವನ್ನು ಉಳಿಸುವ ಯುದ್ಧ. ನಾವು ಈ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ. ಸುದ್ದಿ ಗೋಷ್ಠಿ ವೇಳೆ ಸಿಪಿಐ ವಿರೋಧಿ ಘೋಷಣೆಗಳನ್ನು ಪ್ರತಿಭಟನಾಕಾರ ಕೂಗಿದ. ಇನ್ನು ದಾಳಿ ನಡೆಸಲು ಮುಂದಾದ ವ್ಯಕ್ತಿಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿದರು. ಆದರೆ, ಈ ವ್ಯಕ್ತಿ ದಾಳಿ ನಡೆಸಿದ್ದಕ್ಕೆ ಕಾರಣ ತಿಳಿದುಬಂದಿಲ್ಲ.

1+

Leave a Reply

Your email address will not be published. Required fields are marked *