ಬೆಂಗಳೂರು: ನಗರದ ಕೆಲವು ಪ್ರದೇಶಗಳ ಜನರಿಗೆ ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ನಗರದ ಮುಖ್ಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ದುರಸ್ತಿ ಕಾರ್ಯ ಹಿನ್ನೆಲೆ, ಇಂದಿನಿಂದ ಜನವರಿ 31 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್ ಆರ್ ಬಂಡೆ, ಗೆದ್ದಲಹಳ್ಳಿ, ಬಾಣಸವಾಡಿ, ಎಚ್ ಬಿ ಆರ್ ಲೇಔಟ್, ವಿದ್ಯಾನಗರ, ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಬರೋಬ್ಬರಿ 20 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಒಟ್ಟು 50 ಕ್ಕೂ ಹೆಚ್ಚು ಪ್ರದೇಶಗಳಿಲ್ಲಿ ವಿದ್ಯುತ್ ಅಭಾವದ ಸಮಸ್ಯೆ ಉಂಟಾಗಲಿದೆ.