ವಿಧವೆ ಕುರಿತು ಮೋದಿ ಆಕ್ಷೇಪಾರ್ಹ ಹೇಳಿಕೆ: ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ವೇಳೆ, ಕಾಂಗ್ರೆಸ್​​ನ ವಿಧವೆಯರಿಗೆ ಲಾಭವಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ತಕರಾರು ತೆಗೆದಿದ್ದಾರೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರಿಕುಲವನ್ನು ಅವಮಾನಿಸಿದ್ದಾರೆ ಎಂದಿರುವ ಅವರು, ತನ್ನ ತಾಯಿ ಕೂಡಾ ವಿಧವೆ ಎನ್ನುವುದನ್ನು ಮರೆತಿರುವ ಮೋದಿಯವರು ದ್ವೇಷಾಸೂಯೆಯ ರಸಾತಲ‌ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಕೂಡ ಪ್ರಧಾನಿ ಮೋದಿವಯರ ಹೇಳಿಕೆಯನ್ನು ಟ್ವೀಟ್ ಮೂಲಕ ಖಂಡಿಸಿದ್ದು, ಮಾನ್ಯ ಯವರೇ, ಮಹಿಳೆಯರ ಘನತೆಗೆ ಕುಂದು ತರುವುದು ಸರಿಯಲ್ಲ ಎಂದಿದ್ದಾರೆ. ಜೊತೆಗೆ, ಶ್ರೀಮತಿ ಸೋನಿಯಾ ಗಾಂಧಿಯವರು ವಿಧವೆಯಾಗಿದ್ದು ಅವರ ಪತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಕ್ಕೆ. ನಿಮ್ಮ ಸಂಸ್ಕೃತಿ ಯಾವುದಿದ್ದರೂ ಪ್ರಧಾನಿ ಹುದ್ದೆಗೆ ಕುಂದು ಬರದಂತೆ ನೀವು ನಡೆದುಕೊಳ್ಳಬೇಕು. ನೀವು ದೇಶದ ಜನತೆಯಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

https://twitter.com/annatarajgowda/status/1071291721550651392

0

Leave a Reply

Your email address will not be published. Required fields are marked *