56ನೇ ವಸಂತಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

ಇಂದು ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್​ ಶಿವಣ್ಣನ ಹುಟ್ಟು ಹಬ್ಬದ ಸಂಭ್ರಮ 56 ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣ ಅಭಿಮಾನಿಗಳೊಂದಿಗೆ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ್ರು. ನಗರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ನಿವಾಸದಲ್ಲಿ ಬರ್ತಡೇ ಸೆಲೆಬ್ರೇಷನ್ ಆಚರಿಸಲಾಗುತ್ತಿದೆ..ರಾತ್ರಿಯಿಡೀ ಅಭಿಮಾನಿಗಳು ಶಿವಣ್ಣನ ಮನೆಮುಂದೆ ಜಮಾಯಿಸಿದ್ದು ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಿ ಅಭಿನಂದಿಸಿದ್ರು. ಇನ್ನು ಬರ್ತಡೇ ಪ್ರಯುಕ್ತ ದಿ ವಿಲನ್ ಚಿತ್ರತಂಡ ಮತ್ತೊಂದು ಟೀಸರ್​ ರಿಲೀಸ್​ ಮಾಡಲಿದೆ. ಅಲ್ಲದೇ ರಥಾವರ ಬಂಡಿಯಪ್ಪ ನಿರ್ದೇಶನದ ವೈರಮುಡಿ ಚಿತ್ರದ ಪೋಸ್ಟರ್ ಹಾಗೂ ಯೋಗರಾಜ್ ಭಟ್​ ನಿರ್ದೇಶನದ ಪ್ರೊಡಕ್ಷನ್ ನಂಬರ್ 1 ಚಿತ್ರ ದ ಫಸ್ಟ್ ಲುಕ್ ಕೂಡ ಔಟ್​ ಆಗಿದೆ..ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅಭಿಮಾನಿಗಳಿಂದ ಅನ್ನದಾನ, ರಕ್ತದಾನ ಹಾಗೂ ಸಿಹಿ ಹಂಚುವ ಕಾರ್ಯಕ್ರಮ ನಡೆಯಲಿದೆ.

0

Leave a Reply

Your email address will not be published. Required fields are marked *