ದಿನಕರನ್​ಗೆ ಹಿನ್ನಡೆ

ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಬೆಳವಣಿಗೆ ಗರಿಗೆದರಿದ್ದು,ಇಂದು ಮಹತ್ವದ ಬೆಳವಣಿಗೆ ಆಯ್ತು..ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಎಂದು ದಿನಕರನ್​ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ ತಳ್ಳಿಹಾಕಿದೆ..ಸೆಪ್ಟೆಂಬರ್​20 ರವರೆಗೆ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡುವುದಿಲ್ಲ ಎಂದು ಹೈಕೋರ್ಟ್​ ಹೇಳಿದೆ..ಈ ಮೂಲಕ ದಿನಕರನ್​ ಆಂಡ್​ ಟೀಂಗೆ ಭಾರೀ ಮುಖಭಂಗವಾಗಿದೆ..ಹೈಕೋರ್ಟ್​ನ ಸದ್ಯದ ಈ ತೀರ್ಪಿನಿಂದ ಪಳನಿಸ್ವಾಮಿ ಬಣಕ್ಕೆ ಮಧ್ಯಂತರ ರಿಲೀಫ್ ಸಿಕ್ಕಂತಾಗಿದೆ..ಇನ್ನೊಂದೆಡೆ ವಿಶ್ವಾಸ ಮತ ಯಾಚನೆಗೆ ಮನವಿ ಸಲ್ಲಿಸಿದ್ದ ಸ್ಟಾಲಿನ್​ಗೂ ಕೂಡ ಮುಖಭಂಗವಾಗಿದೆ..ಹಲವು ದಿನಗಳಿಂದ ತಮಿಳುನಾಡಿನಲ್ಲಿ ಡೋಲಾಯಮಾನ ಪರಿಸ್ಥಿತಿ ಉದ್ಭವವಾಗಿದೆ.ಪಳನಿಸ್ವಾಮಿ ಪನ್ನೀರ್​ ಸೆಲ್ವಂ ಬಣ ಸೇರಿ ಸರ್ಕಾರ ರಚಿಸಿದ ಮೇಲೆ ಸರ್ಕಾರವನ್ನು ಉರುಳಿಸಲು ದಿನಕರನ್​ ಬಣ ಶತಾಯಗತಾಯ ಪ್ರಯತ್ನ ನಡೆಸಿತ್ತು..ಹಾಗೆ 22 ಶಾಸಕರೂ ಕೂಡ ದಿನಕರನ್​ಗೆ ಬೆಂಬಲವನ್ನೂ ಸೂಚಿಸಿದ್ದರು.ಇನ್ನೊಂದೆಡೆ ಪಳನಿಸ್ವಾಮಿ ಬಣ ಮೊನ್ನೆ ನಡೆಸಿದ್ದ ಪಕ್ಷದ ಸಾಮಾನ್ಯ ಸಭೆಯಲ್ಲಿಯೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಶಿಕಲಾ ಹಾಗೂ ಪಕ್ಷದ ಉಪಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ದಿನಕರನ್​ರನ್ನು ಉಚ್ಚಾಟಿಸಿದ್ದರು..ಈ ಎರಡೂ ಬೆಳವಣಿಗೆಗಳಿಂದ ದಿನಕರನ್​ಗೆ ಭಾರೀ ಹಿನ್ನಡೆಯಾಗಿದೆ.​

0

Leave a Reply

Your email address will not be published. Required fields are marked *