ಬಿಪಿನ್ ರಾವತ್​​ರನ್ನು ಜನರಲ್ ಡೈಯರ್​ಗೆ ಹೋಲಿಸಿದ ಪಾರ್ಥ ಚಟರ್ಜಿ

ನವದೆಹಲಿ: ಲೇಖಕ ಪಾರ್ಥ ಚಟರ್ಜಿಯವರು ಜನರಲ್ ಬಿಪಿನ್ ರಾವತ್ ಅವರನ್ನು ಬ್ರಿಟಿಷ್ ಅಧಿಕಾರಿ ಜನರಲ್ ಡಯರ್​​ ಅವರಿಗೆ ಹೋಲಿಸುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದಾರೆ. ಕಾಶ್ಮೀರದಲ್ಲಿ ವ್ಯಕ್ತಿಯೊಬ್ಬನನ್ನು ಸೇನಾ ಜೀಪ್​ಗೆ ಕಟ್ಟಿದ ವಿಷಯಕ್ಕೆ ಸಂಬಂಧಪಟ್ಟಂತೆ ಬಿಪಿನ್ ರಾವತ್ ಸೇನಾಧಿಕಾರಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಜನರಲ್ ಬಿಪಿನ್ ರಾವತ್ ಅವರನ್ನು ಜನರಲ್ ಡೈಯರ್​ಗೆ ಹೋಲಿಸಿದ್ದಾರೆ. 1919 ರ ಏಪ್ರಿಲ್ 13 ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 1200ಕ್ಕೂ ನಾಗರಿಕರು ಬಲಿಯಾಗಿದ್ದರು. ಅಂದು ಬ್ರಿಟಿಷ್ ಪೊಲೀಸರು ಮನಸೋಇಚ್ಛೆ ಹಾರಿಸಿದ ಗುಂಡುಗಳಿಗೆ ಇವರು ಬಲಿಯಾಗಿದ್ದರು.

0

Leave a Reply

Your email address will not be published. Required fields are marked *