ನ್ಯಾಯಮೂರ್ತಿ,ಸಿಜೆಐ ನಡುವಿನ ಘರ್ಷಣೆ-ನಾಳೆ ಮುಖ್ಯ ನ್ಯಾಯಮೂರ್ತಿ,ನ್ಯಾಯಮೂರ್ತಿ ಭೇಟಿಯಾಗುವ ಸಾಧ್ಯತೆ

ದೆಹಲಿ:ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ವಿರುದ್ಧ ಸಿಡಿದೆದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಾರ್​ ಅಸೋಸಿಯೇಷನ್​ ಪ್ರತಿಕ್ರಿಯಿಸಿದೆ..ವಕೀಲರ ಒಕ್ಕೂಟದಿಂದ ಇಂದು ಸಭೆ ನಡೆಯಲಿದ್ದು,​ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.ಇನ್ನು ನಾಳೆ ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ಹಾಗೂ ಬಂಡಾಯ ನ್ಯಾಯಮೂರ್ತಿಗಳು ಸಭೆ ನಡೆಸುವ ಸಾಧ್ಯತೆಯಿದೆ.ಇನ್ನೊಂದೆಡೆ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಬಂಡಾಯ ಎದ್ದ ನಾಲ್ವರು ನ್ಯಾಯಮೂರ್ತಿಗಳನ್ನು ಹೊಗಳಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿಕೆ ನೀಡಿದ್ದಾರೆ.. ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಂಗದ ವ್ಯವಸ್ಥೆ ವಿರುದ್ಧ ನ್ಯಾಯಮೂರ್ತಿಗಳು ಬಂಡಾಯ ಎದ್ದಿದ್ದರು.ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದ್ದರು.ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯದಾನ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೈಲಿಗಲ್ಲು.ಆದ್ರೆ ಇತ್ತೀಚಿನ ಕೆಲ ವಿದ್ಯಮಾನಗಳು ಈ ನ್ಯಾಯಾಂಗದ ಘನೆತೆಗೆ ಧಕ್ಕೆ ತಂದಿವೆ ಅಂತ ವಾಗ್ದಾಳಿ ನಡೆಸಿದ್ದರು.

0

Leave a Reply

Your email address will not be published. Required fields are marked *