ಎರಡನೇ ಬಾರಿ ಕಾಮನ್​ವೆಲ್ತ್​ ಚಾಂಪಿಯನ್​ ಆದ ಸೈನಾ,,

ಗೋಲ್ಟ್​​ ಕೋಸ್ಟ್​ ಅಂಗಳದಲ್ಲಿ ಕೊನೆಯ ದಿನವೂ ಭಾರತೀಯ ಕ್ರೀಡಾ ಪಟುಗಳ ದರ್ಬಾರ್ ನಡೆದಿದೆ. ಒಟ್ಟು 66 ಪದಕಗಳನ್ನು ಬಾಚಿಕೊಂಡಿರುವ ಭಾರತ 3ನೇ ಸ್ಥಾನದೊಂದಿಗೆ ಅಭಿಯಾನವನ್ನು ಪೂರ್ಣಗೊಳಿಸಿದೆ.ಗೋಲ್ಡ್​ಕೋಸ್ಟ್​​ ಅಂಗಳದಲ್ಲಿ ನಿನ್ನೆ ನಡೆದ ಕ್ರೀಡೆಗಳಲ್ಲಿ ಎಲ್ಲರ ಚಿತ್ತ ಕದ್ದಿದ್ದು, ಮಹಿಳಾ ಸಿಂಗಲ್ಸ್​ ಬ್ಯಾಡ್ಮಿಂಟನ್​.. ಏಕೆಂದ್ರೆ, ಫೈನಲ್​​ನಲ್ಲಿ ಭಾರತೀಯ ಕ್ರೀಡಾ ಪಟುಗಳು ಮುಖಾಮುಖಿಯಾಗುತ್ತಿದ್ದರು. ಇಬ್ಬರೂ ಒಲಿಂಪಿಕ್ಸ್​ ಪದಕ ವಿಜೇತರೆ. ಯಾರು ಈ ಬಾರಿ ಕಾಮನ್​ವೆಲ್ತ್​ ಚಾಂಪಿಯನ್​ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಹೀಗಾಗಿ ಎಲ್ಲರ ದೃಷ್ಠಿ ಈ ಸ್ಟಾರ್ ಪ್ಲೇಯರ್​​ಗಳ ಮೇಲೆ ನೆಟ್ಟಿತ್ತು.

ಫೈನಲ್​​ನಲ್ಲಿ ಭಾರತದ ಇಬ್ಬರು ಖ್ಯಾತ ನಾಮರು ಎದುರ ಬದರಾದ್ರೆ, ಅಭಿಮಾನಿಗಳಲ್ಲಿ ಫುಲ್​ ಜೋಶ್​.. ಸೈನಾ ಕೈ ಮೇಲಾಗುತ್ತಾ, ಸಿಂಧು ಬಂಗಾರ ಗೆಲ್ತಾರಾ ಎಂಬ ಚರ್ಚೆ ಶುರುವಾಗಿತ್ತು. ಇಬ್ಬರೂ ತಾಂತ್ರಿಕವಾಗಿ ಬಲಾಢ್ಯರೇ, ಆದ್ರೆ ಗಾಯದ ಸಮಸ್ಯೆ ಒಲಿಂಪಿಕ್ಸ್​​ ಕಂಚಿನ ಪದಕ ವಿಜೇತೆ ಸೈನಾರನ್ನು ಕಾಡಿತ್ತು. ಆದ್ರೆ ಸಿಂಧು ಪ್ರಸಕ್ತ ವರ್ಷ ಭರ್ಜರಿ ಫಾರ್ಮ್​​ನಲ್ಲಿರುವ ಉತ್ಸಾಹದಲ್ಲಿದ್ರು. ಫೈನಲ್​ ಆರಂಭವಾಗುತ್ತಿದ್ದಂತೆ ಬ್ಲ್ಯೂ ಜೆರ್ಸಿ ತೊಟ್ಟು ಸೈನಾ ಅಂಗಳಕ್ಕೆ ಇಳಿದ್ರೆ, ರೆಡ್​ ಜೆರ್ಸಿಯಲ್ಲಿ ಸಿಂಧು ಅಖಾಡ ಪ್ರವೇಶಿಸಿದ್ರು. ಅಂಕಗಳನ್ನು ಉಭಯ ಆಟಗಾರ್ತಿಯರು ಸುಲಭವಾಗಿ ನೀಡಲಿಲ್ಲ. ಸಿಂಧು ನ್ಯೂನತೆಯನ್ನು ಅರಿತು ಆಡಿದ ಸೈನಾ ಮೊದಲ ಸೆಟ್​​ನಲ್ಲಿ ಗೆಲುವು ದಾಖಲಿಸಿದ್ರು.

ಎರಡನೇ ಸೆಟ್​​ನ ಮೊದಲಾವಧಿಯಲ್ಲಿ ಸಿಂಧು ಮೇಲುಗೈ ಸಾಧಿಸಿದ್ರು. ರೋಚಕ ಫೈಟ್​ ನೋಡುವ ಅವಕಾಶ ಎಲ್ಲರದ್ದಾಗಿತ್ತು. ಎರಡನೇ ಸೆಟ್​​ನಲ್ಲಿ ಉತ್ತರಾರ್ಧದಲ್ಲಿ ತಮ್ಮ ನೈಜ ಆಟವನ್ನು ಆಡಿದ ಸೈನಾ ಅಂಕಗಳನ್ನು ಕೊಳ್ಳೆ ಹೊಡೆದು ಸುಲಭವಾಗಿ ಸೆಟ್​ ಗೆದ್ದರು. ಅಲ್ಲದೆ ಕಾಮನ್​ವೆಲ್ತ್​ ಚಾಂಪಿಯನ್​ ಪಟ್ಟವನ್ನು ಎರಡನೇ ಬಾರಿ ಅಲಂಕರಿಸಿದ್ರು. ಇನ್ನು ಪುರುಷರ ಸಿಂಗಲ್ಸ್​ನಲ್ಲಿ ಕಿಡಂಬಿ ಶ್ರೀಕಾಂತ್​ ಹಾಗೂ ಮಲೇಷ್ಯಾದ ಲಿ. ಚಾಂಗ್​ ಹೋರಾಟವೂ ಎಲ್ಲರ ಚಿತ್ತ ಕದ್ದಿತು. ಹಾಲಿ ನಂಬರ್​ 1 ಹಾಗೂ ಮಾಜಿ ನಂಬರ್​ 1 ಪ್ಲೇಯರ್​​ಗಳ ಕಾದಾಟಕ್ಕೆ ಫೈನಲ್​ ಸಾಕ್ಷಿಯಾಯಿತು. ಮೊದಲ ಸೆಟ್​​ನಲ್ಲಿ ಗೆಲುವು ದಾಖಲಿಸಿದ ಶ್ರೀಕಾಂತ್​, ಬಂಗಾರದ ಸನೀಹಕ್ಕೆ ಬಂದ್ರು. ಆದ್ರೆ ಎರಡನೇ ಹಾಗೂ ಮೂರನೇ ಸೆಟ್​​ನಲ್ಲಿ ಉತ್ತಮ ಆಟ ಆಡಿದ ಲಿ ಚಾಂಗ್​ ಚಾಂಪಿಯನ್​ ಪಟ್ಟ ಅಲಂಕರಿಸಿದ್ರು.

ಗೋಲ್ಡ್​ಕೋಸ್ಟ್​ನಲ್ಲಿ ನಡೆದ ಕಾಮನ್​ವೆಲ್ತ್​ ಕ್ರೀಡಾಕೂಟಕ್ಕೆ ನಿನ್ನೆ ಅದ್ಧೂರಿ ತೆರೆ ಬಿದ್ದಿದೆ. ಅದ್ಧೂರಿಯಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತದ ಮಹಿಳಾ ಸ್ಟಾರ್ ಬಾಕ್ಸರ್​ ಮೇರಿ ಕೋಮ್,ಸ ತ್ರಿವರ್ಣ ಧ್ವಜ ಹಿಡಿದು ಸಾಗಿದ್ರು. ಇನ್ನು ಕ್ರೀಡಾಕೂಟದ 11ನೇ ದಿನ ಭಾರತ 1 ಚಿನ್ನ, 4 ಬೆಳ್ಳಿ, 1 ಕಂಚಿನೊಂದಿಗೆ ಒಟ್ಟು 7 ಪದಕಗಳನ್ನು ಗೆದ್ದುಕೊಂಡಿತು. ಈ ಮೂಲಕ ಪದಕ ಪಟ್ಟಿಯಲ್ಲಿ 3 ನೇ ಸ್ಥಾನ ಸಾಧಸಿತು. ಒಟ್ಟಿನಲ್ಲಿ ಹನ್ನೊಂದು ದಿನಗಳ ಕಾಲ ನಡೆದ ಕ್ರೀಡಾಹಬ್ಬದಲ್ಲಿ ಭಾರತದ ಕ್ರೀಡಾಪಟುಗಳು, ಅಮೋಘ ಸಾಧನೆ ಮಾಡುವ ಮೂಲಕ ದೇಶಕ್ಕೆ ತಂದಿದ್ದಾರೆ. ಆಗಸ್ಟ್​ನಲ್ಲಿ ಇಂಡೋನೇಶ್ಯಾದಲ್ಲಿ ನಡೆಯುವ ಏಷಿಯನ್ ಗೇಮ್ಸ್​ನಲ್ಲಿ ಇದೇ ಸಾಧನೆ ಮರುಕಳಿಸಲಿ ಅನ್ನೋದೆ ಕ್ರೀಡಾಭಿಮಾನಿಗಳ ಆಶಯ

ಸ್ಪೋರ್ಟ್ಸ್​ ಬ್ಯೂರೊ ಸುದ್ದಿ ಟಿವಿ

0

Leave a Reply

Your email address will not be published. Required fields are marked *