ಬಿ.ಸಾಯ್​ ಪ್ರಣೀತ್ ಥಾಯ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಫೈನಲ್​​ನಲ್ಲಿ ಜಯ ಸಾಧಿಸಿದ್ದಾರೆ…

ಭಾರತದ ಭರವಸೆಯ ಬ್ಯಾಡ್ಮಿಂಟನ್​ ಆಟಗಾರ ಬಿ.ಸಾಯ್​ ಪ್ರಣೀತ್ ಅವರು ಥಾಯ್ಲೆಂಡ್​ ಓಪನ್​  ಬ್ಯಾಡ್ಮಿಂಟನ್​ ಟೂರ್ನಿಯ ಫೈನಲ್​​ನಲ್ಲಿ ಜಯ ಸಾಧಿಸಿದ್ದಾರೆ.. ಈ ಮೂಲಕ ಪ್ರಣೀತ್​ ಒಂದೇ ವರ್ಷದಲ್ಲಿ ಎರಡನೇ ಪ್ರಶಸ್ತಿಯನ್ನು ಪಡೆದು ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಪ್ರಣೀತ್​​ 17-21, 21-18, 21-19 ರಿಂದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟ್ ವಿರುದ್ಧ ಜಯ ಸಾಧಿಸಿದರು. ಮೊದಲ ಸೆಟ್​​ನಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಹಾಗೂ ಮೂರನೇ ಸೆಟ್​​ನಲ್ಲಿ ಪುಟಿದೆದ್ದ ಪ್ರಣೀತ್​ ಸೊಗಸಾದ ಆಟದ ಪ್ರದರ್ಶನ ನೀಡಿದರು. ಉತ್ತಮ ಸ್ನ್ಯಾಷ್​ ಹಾಗೂ ಗ್ಯಾಪ್​ ಶಾಟ್​​ಗಳ ಪ್ರದರ್ಶನ ನೀಡಿದ ಪ್ರಣೀತ್​, ಅಭಿಮಾನಿಗಳ ಮನ ಗೆದ್ದರು. ಎರಡನೇ ಹಾಗೂ ನಿರ್ಣಾಯಕ ಸೆಟ್​​ನಲ್ಲಿ ಆಕರ್ಷಕ ಆಟದ ಪ್ರದರ್ಶನ ನೀಡಿದ ಪ್ರಣೀತ್​ ಪ್ರಶಸ್ತಿಗೆ ಮುತ್ತಿಟ್ಟರು. ಒತ್ತಡವಿಲ್ಲದೆ ನೈಜ ಆಟವನ್ನು ಆಡಿದ ಪ್ರಣೀತ್ ಟ್ರೋಫಿ ಎತ್ತಿ ಸಂಭ್ರಮಿಸಿದ್ರು.

0

Leave a Reply

Your email address will not be published. Required fields are marked *