ಆಕೆಗೆ ಪತಿಯನ್ನ ವಿಶ್ವಕಪ್​ ತಂಡದಲ್ಲಿ ನೋಡುವ ಬಯಕೆ..!

ಟೀಮ್ ಇಂಡಿಯಾದ ಆ ಕ್ರಿಕೆಟಿಗ ಟೆಸ್ಟ್​ ತಂಡದ ಖಾಯಂ ಪ್ಲೇಯರ್​ ಆಗಿದ್ದಾನೆ. ಕಳೆದೆರೆಡು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡ್ತಿರೋ ಆತನ ಪತ್ನಿಗೆ ಇದೀಗ ಒಂದು ಬಯಕೆ ಶುರುವಾಗಿದೆ. ಈ ಮಾತು ನಾವ್ ಹೇಳ್ತಾ ಇರೋದಲ್ಲ, ಬದಲಿಗೆ ಟೀಮ್ ಇಂಡಿಯಾ ಕ್ರಿಕೆಟಿಗ ವೃದ್ದಿಮಾನ್ ಸಾಹಾ ಪತ್ನಿ ಹೇಳ್ತಿರೋದು..ಎಲ್ಲರಿಗೂ ತಮ್ಮ ಮಕ್ಕಳು ರಾಷ್ಟ್ರೀಯ ತಂಡದಲ್ಲಿ ಆಡಬೇಕು. ವಿಶ್ವಕಪ್​ ಟೂರ್ನಿಗಳಲ್ಲಿ ಪಾಲ್ಗೋಳ್ಳಬೇಕು ಎಂಬ ಬಯಕೆ ಇದ್ದೇ ಇರುತ್ತೆ. ಅದೇ ಮದ್ವೆಯಾದ ಮೇಲೆ ಆತನ ತಾಯಿಯಷ್ಟೇ ಕಾಳಜಿ ಆತನ ಪತ್ನಿಗೂ ಇರುತ್ತೆ. ಅದು ಸಾಹಾ ವಿಚಾರದಲ್ಲಿ ಸಾಭೀತಾಗಿದೆ.

ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿರೋ ವೃದ್ದಿಮಾನ್ ಸಾಹಾ ಕಳೆದೆರೆಡು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ಮೇಲೆ ಸಾಹಾ ಟೆಸ್ಟ್​ ಕ್ರಿಕೆಟ್​ನಲ್ಲಿ ಆಡೋ ಅವಕಾಶ ಸಿಕ್ಕಿತು. ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ಸಾಹಾ ಟೆಸ್ಟ್ ಕ್ರಿಕೆಟ್​ನ ಕಾಯಂ ಪ್ಲೇಯರ್​ ಆಗಿದ್ದಾರೆ.ಏಕದಿನ ಕ್ರಿಕೆಟ್​ನಲ್ಲಿ ಕ್ಲಿಕ್ ಆಗದ ಸಾಹಾ ಟೀಮ್ ಇಂಡಿಯಾ ಪರ ಆಡಿದ್ದು, ಕೇವಲ 9 ಏಕದಿನ ಪಂದ್ಯಗಳು ಮಾತ್ರ. ಆದ್ರೆ, ಕೇವಲ 5 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ ಸಾಹಾ 2014ರ ನಂತರ ಏಕದಿನ ಕ್ರಿಕೆಟ್​ ತಂಡದಲ್ಲಿ ಸ್ಥಾನ ಪಡೆಯಲೇ ಇಲ್ಲ. ಇದೀಗ ಟೆಸ್ಟ್​​ನಲ್ಲಿ ಅದ್ಭುತ ಫಾರ್ಮ್​ನಲ್ಲಿರೋ ಸಾಹಾ 2019ರ ವಿಶ್ವಕಪ್ ​ತಂಡದಲ್ಲಿ ಆಡೋ ಬಯಕೆಯಾಗಿದೆಯಂತೆ.

ಅದು ಸಾಹಾಗಲ್ಲ, ಬದಲಿಗೆ ಅತನ ಪತ್ನಿಗೆ ಅನ್ನೋದು ಇಲ್ಲಿ ವಿಶೇಷ.. ಸಾಹಾ ಪತ್ನಿ ರೋಮಿ ಸಾಹಾಗೆ ತನ್ನ ಪತಿ 2019 ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ. ಅಲ್ದೇ ಪ್ಲೇಯಿಂಗ್ ಇಲೆವನ್​ನಲ್ಲಿ ಸಾಹಾ ಆಡಬೇಕು ಎಂಬ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾಳೆಂದು ಸಾಹಾ ಹೇಳಿದ್ದಾರೆ.ಆದ್ರೇ, ಸಾಹಾ ಅದು ನನ್ನ ಪತ್ನಿಯ ಅಭಿಲಾಷೆ ಆಗಿರಬಹುದು. ಆದ್ರೆ, ನನ್ನನ್ನ ವಿಶ್ವಕಪ್​ ತಂಡದಲ್ಲಿ ಆಡಿಸುವುದು ಬಿಡುವುದು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬಿಟ್ಟ ವಿಚಾರ.. ಎಲ್ಲರಿಗೂ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಆಡೋ ಬಯಕೆ ಇರುತ್ತೆ. ಅದು ನನಗೂ ಇದೆ. ಆದ್ರೆ, ಅದನ್ನ ಆಯ್ಕೆ ಸಮಿತಿಗೆ ಬಿಟ್ಟಿದ್ದು. ನಾನು ಮಾತ್ರ ನನ್ನ ಆಟದ ಕಡೆ ಗಮನ ವಹಿಸುತ್ತೇನೆ ಎಂದು ಸಾಹಾ ಹೇಳಿದ್ರು.

ವೃದ್ದಿಮಾನ್ ಸಾಹಾ
ಪಂದ್ಯ –        09
ರನ್ –          41
ಬೆಸ್ಟ್ –         16

2010 ರಲ್ಲಿ ನ್ಯೂಜಿಲೆಂಡ್​ ವಿರುದ್ಧ ಏಕದಿನ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ವೃದ್ದಿಮಾನ್ ಸಾಹಾ ಇದುವರೆಗೂ 9 ಪಂದ್ಯಗಳ್ನಾಡಿದ್ದು, 41 ರನ್ ಕಲೆಹಾಕಿದ್ದಾರೆ. ಇವರ ಬೆಸ್ಟ್ ಸ್ಕೋರ್ 16 ರನ್ ಆಗಿದೆ. ಹೀಗಾಗಿ 2014ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯ ಸಾಹಾಗೆ ಕೊನೆಯ ಪಂದ್ಯವಾಗಿತ್ತು. ಅನಂತರ ಟೀಮ್ ಇಂಡಿಯಾ ಪರ ಒಂದೇ ಒಂದು ಏಕದಿನ ಪಂದ್ಯವನ್ನಾಡಿಲ್ಲ. ಆದ್ರೀಗ ಟೆಸ್ಟ್ ಕ್ರಿಕೆಟ್​ನಲ್ಲಿನ ಅವರ ಆಟವನ್ನ ಪರಿಗಣನೆಗೆ ತೆಗೆದುಕೊಂಡು ತಂಡದಲ್ಲಿ ಸ್ಥಾನ ನೀಡೋದು ತುಂಬಾ ಕಠೀಣ. ಅಲ್ದೇ, ತಂಡದಲ್ಲಿ ಸಾಕಷ್ಟು ಯುವ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದ್ರೀಗ, ಎಲ್ಲರಿಗೂ ಇರುವಂತೆ ಸಹಜ ಬಯಕೆ ಸಾಹಾ ಪತ್ನಿಗೂ ಇದೆ. ನನ್ನ ಪತಿ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದಾರೆ. ಆದ್ರೆ, ಅವರ ಕನಸಿಗೆ ಬಿಸಿಸಿಐನ ಆಯ್ಕೆ ಸಮಿತಿಯೆ ಉತ್ತರಿಸಬೇಕು….
ಶಿವಕುಮಾರ್, ಕೆ ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *