ಮಹಾನ್ ಸಾಧಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ಹುಟ್ಟು ಹಬ್ಬ…

ಇಂದು ಭಾರತೀಯ ಸಿನಿಮಾ ರಂಗದ ಮಹಾನ್ ಸಾಧಕ. ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ, ನಟ, ನಿರ್ಮಾಪಕ, ಎಸ್​ಪಿ ಬಾಲಸುಬ್ರಮಣ್ಯಂ ಅವರ ಹುಟ್ಟು ಹಬ್ಬ. 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಭಾರತದ ಗಾನ ಕೋಗಿಲೆ. 1966ರಲ್ಲಿ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಸಿನಿ ಪಯಣ ಪ್ರಾರಂಭಿಸಿದರು.ಕನ್ನಡದ ನಕ್ಕರೆ ಅದೇ ಸ್ವರ್ಗ ಚಿತ್ರದಲ್ಲಿ ಕನಸಿದೋ ನನಸಿದೋ ಎಂಬದು ಎಸ್​ ಪಿ ಬಿ ಹಾಡಿದ ಮೊದಲ ಹಾಡು. 50 ವರ್ಷಗಳ ಸಿನಿ ಪಯಣದಲ್ಲಿ ಹಲವು ಭಾಷೆಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಡಾಕ್ಟರೇಟ್​ ಗೌರವ ಹೀಗೆ ನೂರಾರು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಹೆಸರಾಂತ ಗಾಯಕ ಎಸ್​ಪಿಬಿ.

0

Leave a Reply

Your email address will not be published. Required fields are marked *