ಯಶ್ ಹತ್ಯೆಗೆ ರೌಡಿ ಶೀಟರ್ ಸ್ಕೆಚ್..?

ಸೈಕಲ್ ರವಿ ವಿಚಾರಣೆ ಸ್ಫೋಟಕ ಮಾಹಿತಿ ಬಹಿರಂಗ. ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಹಾಕಲಾಗಿತ್ತಂತೆ ಸ್ಕೆಚ್…?. ಸಿಸಿಬಿ ತನಿಖೆ ವೇಳೆ ಬಯಲಾಯ್ತು ಸ್ಯಾಂಡಲ್‌ವುಡ್ ಬೆಚ್ಚಿಬೀಳೊ ಸುದ್ದಿ..!.ಎರಡು ವರ್ಷಗಳ ಹಿಂದೆ ಯಶ್ ಹತ್ಯೆಗೈಯ್ಯಲು ಸಂಚು ರೂಪಿಸಿದ್ನ ಸೈಕಲ್ ರವಿ..?. ಸಿಸಿಬಿ ತನಿಖಾಧಿಕಾರಿಗಿಳಿಂದ ಬಯಲಾಯ್ತು ಸ್ಫೋಟಕ ಮಾಹಿತಿ. ಕುಖ್ಯಾತ ರೌಡಿ ಶೀಟರ್ ಕೋದಂಡನಿಗೆ ಸಾಥ್ ನೀಡಿದ್ನಾ ಸೈಕಲ್ ರವಿ..?. ರೌಡಿ ಶೀಟರ್ ಕೋದಂಡನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ ಪೊಲೀಸರು.

ಈ ಕುರಿತು ಸ್ವತಃ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ವರ್ಷದ ಹಿಂದ ಕಮಿಷನರ್ ಭೇಟಿಯಾಗಿದ್ದು ನಿಜ. ಇನ್ನು ಇದು ತುಂಬಾ ಸೂಕ್ಷ್ಮ ವಿಚಾರ. ಹೀಗಾಗಿ ಈ ಕುರಿತು ಹೆಚ್ಚೇನು ಹೇಳುವುದಿಲ್ಲ ಅಂತ ಯಶ್ ಹೇಳಿದ್ದಾರೆ…

ಇನ್ನು ಯಶ್ ಹತ್ಯೆ ಸಂಚು ವಿಚಾರವಾಗಿ ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್, ಕ್ರೈಂ ನಡೀಲೇ ಬಾರದು ಅನ್ನೋದು ನಮ್ಮ ಅಭಿಪ್ರಾಯ. ಯಶ್ ಅಂತ ಅಷ್ಟೇ ಅಲ್ಲ ಯಾರೇ ಆಗಿರಲಿ ಪ್ರತಿಯೊಬ್ಬರ ಪ್ರಾಣಕ್ಕೂ ಬೆಲೆ ಇದೆ. ಸ್ವಲ್ಪ ಸಂಶಯ ಬರ್ತಿದ್ದ ಹಾಗೆ ಪೋಲೀಸರು ಕ್ರಮ ಕೈಗೊಳ್ಳಬೇಕು. ಈ ರೀತಿ ವಿಷಯ ಗೊತ್ತಾದಾಗ ನಮಗ್ಯಾಕೆ ಅಂತ ಸುಮ್ಮನಿರಬಾದ್ರು ಅಂತ ಶಿವರಾಜ್ ಹೇಳಿದ್ರು…

0

Leave a Reply

Your email address will not be published. Required fields are marked *