ಆಂಗ್ಲರ ನಾಡಲ್ಲಿ ರೋಹಿತ್​ ಬೊಂಬಾಟ್ ಬ್ಯಾಟಿಂಗ್​

ಇಂಗ್ಲೆಂಡ್​ ಪ್ರವಾಸದಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಹಲವು ದಾಖಲೆಗಳನ್ನ ನಿರ್ಮಿಸುತ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್​ ಅ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ಅಲ್ಲದೇ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯ ದಾಖಲೆಯನ್ನ ಅಳಸಿ ಹಾಕಿದ್ದಾರೆ. ಹಾಗಾದ್ರೆ ರೋಹಿತ್​ರ ಅ ದಾಖಲೆ ಏನು ಅಂತ ನೋಡ್ಕೊಂಡು ಬರೋಣ ಬನ್ನಿ.

ವಿರಾಟ್ ಸೇನೆ ಇಂಗ್ಲೆಂಡ್ ವಿರುದ್ಧ ಚುಟುಕು ಸರಣಿ ಗೆದ್ದ ನಂತರ, ಏಕದಿನ ಸರಣಿಯಲ್ಲು ಶುಭಾರಂಭ ಮಾಡಿದೆ. ಟಿ-20 ಸರಣಿ ಮೂರು ಪಂದ್ಯಗಳು ಸೇರಿದಂತೆ ಈವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ದಾರೆ. ಅದರಲ್ಲೂ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ತಮ್ಮ ಬ್ಯಾಟಿಂಗ್ ಆರ್ಭಟ ಬಲು ಜೋರಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಐಪಿಎಲ್​ 11 ಆವೃತ್ತಿಯಲ್ಲಿ ಮುಗ್ಗರಿಸಿದ್ದ ರೋಹಿತ್​ ಆಟದ ಬಗ್ಗೆ ಹಲವು ವಿಮರ್ಶೆಗಳು ಕೇಳಿಬಂದಿದ್ವು. ಆದ್ರೆ ಆಂಗ್ಲರ ನಾಡಲ್ಲಿ ರೋಹಿತ್ ಬ್ಯಾಟ್​ ಭರ್ಜರಿ ಸೌಂಡ್​ ಮಾಡ್ತಿದೆ. ಇಂಗ್ಲೆಂಡ್​​ನ​ ಬೌನ್ಸಿ ಪಿಚ್​ಗಳಲ್ಲಿ ರೋಹಿತ್​ ರನ್​ ಬೇಟೆಯಾಡುತ್ತಿದ್ದಾರೆ. ಈ ಮೂಲಕ ತಮ್ಮ ಆಯ್ಕೆ, ಫಿಟ್​ನೆಸ್​ ಬಗ್ಗೆ ಕುಹಕವಾಡಿದ್ದವರಿಗೆ ಮತ್ತೊಮ್ಮೆ ಬ್ಯಾಟ್​ನಿಂದಲೇ ಉತ್ತರಿಸಿದ್ದಾರೆ.

ಆಂಗ್ಲರ ವಿರುದ್ಧ ರೋಹಿತ್​ ಫಾರ್ಮ್​​ಗೆ ಮರಳುವುದರೊಂದಿಗೆ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ಟಿ-20 ಸರಣಿಯ ಕೊನೆಯ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಸಿಂಗಲ್​ ಹ್ಯಾಂಡ್​ನಿಂದ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದ ರೋಹಿತ್​, ಮೊದಲ ಏಕದಿನದಲ್ಲೂ ಸ್ಪೋಟಕ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಇದರಿಂದ ರೋಹಿತ್​ ದಾಖಲೆಗಳ ಪಟ್ಟಿಗೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ರೋಹಿತ್​ ಈವರೆಗೂ ತಾವಾಡಿದ ಸತತ ಏಳು ಸರಣಿಗಳಲ್ಲಿ ಏಳು ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ಯಾಪ್ಟನ್ ವಿರಾಟ್​ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ಕೊಹ್ಲಿ ಈ ಹಿಂದೆ ಸತತ ಆರು ಸರಣಿಗಳಲ್ಲಿ ಆರು ಶತಕ ದಾಖಲಿಸಿದ್ದರು.

ರೋಹಿತ್ ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ವಿರುದ್ದ ಶತಕ ಬಾರಿಸಿದ್ದರು. ಅದಾದ ನಂತರ ಶ್ರೀಲಂಕಾದಲ್ಲಿ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಡಿಸೆಂಬರ್​ನಲ್ಲಿ ಶ್ರೀಲಂಕಾ ವಿರುಧದ್ದ ಸರಣಿಯಲ್ಲಿ ತಲಾ ಒಂದು ಶತಕ ದಾಖಲಿಸಿದ್ರು. ಫೆಬ್ರವರಿಯಲ್ಲಿ ನಡೆದ ದಕ್ಷಿಣಾ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ರೋಹಿತ್​ ಶತಕ ಸಿಡಿಸಿದ್ರು. ಈಗ ಇಂಗ್ಲೆಂಡ್​ ಪ್ರವಾಸದಲ್ಲಿ 1 ಶತಕ ಸೇರಿ ಒಟ್ಟು ರೋಹಿತ್​ 7 ಸರಣಿಗಳಲ್ಲಿ 8 ಶತಕ ದಾಖಲಿಸಿದ ಸಾಧನೆಗೈದಿದ್ದಾರೆ.ಅದೇನೆ ಇರಲಿ, ರೋಹಿತ್​ ಆಂಗ್ಲರ ವಿರುದ್ಧದ ಏಕದಿನ ಸರಣಿಯಲ್ಲೂ ಇದೇ ಪ್ರದರ್ಶನ ನೀಡಲಿ ಅನ್ನೋದು ಅಭಿಮಾನಿಗಳ ಆಶಯ.

0

Leave a Reply

Your email address will not be published. Required fields are marked *