ನನ್ನನ್ನು ಜಾಹೀರಾತುಗಳಿಂದ ಕೈಬಿಡುವಂತೆ ಬಲಪಂಥೀಯರ ಒತ್ತಡ: ಪ್ರಕಾಶ್ ರೈ

ಕಮರ್ಷಿಯಲ್ ಜಾಹಿರಾತಿನಿಂದ ನನ್ನನ್ನು ಕೈಬಿಡುವಂತೆ ಕಂಪನಿ ಮಾಲೀಕರಿಗೆ ಬಲಪಂಥೀಯರು ಒತ್ತಡ ಹೇರುತ್ತಿದ್ದಾರೆ : ನಟ ಪ್ರಕಾಶ್ ರೈ ನಾನು ನಟಿಸುವ ಜಾಹಿರಾತುಗಳಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರೆಸದಂತೆ ಬಲಪಂಥೀಯರು ಸಂಸ್ಥೆ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇಲ್ಲಿಯವರೆಗೆ ಬಾಲಿವುಡ್ ನಟರಾದ ಅಮೀರ್ ಖಾನ್, ಶಾರುಖ್ ಖಾನ್ ಅನುಭವಿಸುತ್ತಿದ್ದ ಈ ನಿಷೇಧದ ಬಿಸಿ ಪ್ರಕಾಶ್ ರೈ ಅವರಿಗೆ ಕೂಡ ತಟ್ಟಿದಂತಾಗಿದೆ.

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇ? ಏನನ್ನೋ ಟೀಕಿಸಿದರೆ ಮತ್ಯಾರನ್ನೋ ಟೀಕಿಸುತ್ತಿದ್ದಾರೆ ಎಂದು ಭಾವಿಸಿ ವೈಯಕ್ತಿಕ ದಾಳಿ ನಡೆಸುವುದು ಎಷ್ಟು ಸರಿ? ಎಂದು ಕೂಡ ಅವರು ಪ್ರಶ್ನಿಸಿದ್ದಾರೆ. ಇನ್ನು,ಜಾಹಿರಾತುಗಳಿಂದ ನನ್ನನ್ನು ಕೈಬಿಡುವಂತೆ ಕಂಪನಿಗಳ ಮಾಲೀಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಸ್ವತಃ ಸಂಸ್ಥೆಗಳ ಮಾಲೀಕರೇ ತಿಳಿಸಿದ್ದಾರೆ. ಆದರೆ, ನಾವು ನಿಮ್ಮ ಜೊತೆಗಿದ್ದೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

0

Leave a Reply

Your email address will not be published. Required fields are marked *