ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್​ಬಿಐ

ನವದೆಹಲಿ: 2017 – 18ರ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್​​ಬಿಐ ಮುಂದಾಗಿದ್ದು, ರೆಪೋ ದರವನ್ನು ಶೇ.6ರಲ್ಲೇ ಉಳಿಸಿ ನಿರ್ಧಾರ ಕೈಗೊಂಡಿದೆ. ಹಣದುಬ್ಬರ ಪ್ರಮಾಣವನ್ನು 4.3 ರಿಂದ 4.7ಕ್ಕೆ ನಿಗದಿಗೊಳಿಸಲಾಗಿದ್ದು, ರಿವರ್ಸ್ ರಿಪೋ ದರ 5.75ರಲ್ಲೇ ಮುಂದುವರಿಯಲಿದೆ. ಇನ್ನು ಬ್ಯಾಂಕುಗಳ ಕನಿಷ್ಠ ಮೀಸಲು ಪ್ರಮಾಣವನ್ನು 6.25ಕ್ಕೆ ನಿಗದಿಗೊಳಿಸಿದ್ದ ಹಿಂದಿನ ಅವಧಿಯ ಪ್ರಮಾಣವನ್ನೇ ಮುಂದುವರೆಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಹಣದುಬ್ಬರ, ಸ್ಥಿರ ಬೆಳವಣಿಗೆ ಮತ್ತು ಅನಿಶ್ಚಿತತೆ ಕಾರಣಗಳಿಂದಾಗಿ ಬಡ್ಡಿದರಗಳಲ್ಲಿ ಯಾವುದೇ ಕಡಿತ ಅಥವಾ ಹೆಚ್ಚಳ ಮಾಡಿಲ್ಲ. ಆರ್​ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿ ನಿರ್ಧಾರ ಘೋಷಿಸಿದ್ದು, ಜಿಡಿಪಿ ದರ ಶೇ. 6.3 ಕ್ಕೆ ಚೇತರಿಕೆಯಾದ ಹಿನ್ನೆಲೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ತರಲು ಮುಂದಾಗಿಲ್ಲ. ಆರ್​ಬಿಐ ನಿನ್ನೆ ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಅಲ್ಪಾವಧಿ ಬಡ್ಡಿದರ ನಿಗದಿಗೊಳಿಸುವ ಕುರಿತು ಚರ್ಚಿಸಲಾಗಿತ್ತು.

0

Leave a Reply

Your email address will not be published. Required fields are marked *