ವಿರಾಟ್​ ಕೊಹ್ಲಿ VS ರೋಹಿತ್​ ಶರ್ಮಾ…

ತವರಿನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ವಿರುದ್ಧ ಸೋಲಿನ ಕಹಿಯನ್ನು ಮರೆಯಲು, ಆರ್​ಸಿಬಿ ಮಂಗಳವಾರ ಉತ್ತಮ ಅವಕಾಶ. ಮುಂಬೈನಲ್ಲಿ ನಡೆಯಲಿರುವ ಐಪಿಎಲ್​​ ಪಂದ್ಯದಲ್ಲಿ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್​ ಸವಾಲು ಎದುರಿಸಲಿದೆ. ದಕ್ಷಿಣ ಭಾರತದ ತಂಡಗಳ ಫೈಟ್​ ರೋಚಕತೆ ಹುಟ್ಟಿಸಿದೆ.ಮುಂಬೈನ ವಾಂಖೇಡೆ ಅಂಗಳದಲ್ಲಿ ಇಂದು ನಡೆಯಲಿರುವ 11ನೇ ಆವೃತ್ತಿಯ ಐಪಿಎಲ್​ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ಒಂದು ತಂಡದಲ್ಲಿ ಟೀಮ್​ ಇಂಡಿಯಾದ ಖಾಯಂ ನಾಯಕ ಹಾಗೂ ಇನ್ನೊಂದು ತಂಡದಲ್ಲಿ ಟೀಮ್​ ಇಂಡಿಯಾದ ಅರೇಕಾಲಿಕ ನಾಯಕ ರೋಹಿತ್​ ಶರ್ಮಾ ಮುಖಾಮುಖಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಇಬ್ಬರು ಎದುರು ಬದರು ಆಗುತ್ತಿರುವುದು ವಿಶೇಷ. ಒಂದು ತಂಡ ಹ್ಯಾಟ್ರಿಕ್​ ಸೋಲುಗಳನ್ನು ಕಂಡು, ಗೆಲುವಿನ ಲಯಕ್ಕೆ ಮರಳಲು ಪ್ಲಾನ್​ ಮಾಡಿಕೊಂಡ್ರೆ, ಆರ್​ಸಿಬಿ ಸಹ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಉಭಯ ತಂಡಗಳಲ್ಲಿಯೂ ಸ್ಟಾರ್ ಆಟಗಾರರ ದಂಡೇ ಇದ್ದು, ಸಮಯೋಚಿತ ಆಟ ಮೂಡಿ ಬರದೇ ಇರೋದು ಮ್ಯಾನೆಜ್ಮೆಂಟ್​ ಚಿಂತೆಯನ್ನು ಹೆಚ್ಚಿಸಿದೆ. ಇಂದಿನ ಪಂದ್ಯದಲ್ಲಾದ್ರೂ ಶ್ರೇಷ್ಠ ಪ್ರದರ್ಶನ ನೀಡುವ ಅನಿವಾರ್ಯತೆ ಉಭಯ ತಂಡದ ಆಟಗಾರರಿಗೆ ಇದೆ.

ಆರ್​​ಸಿಬಿ ತವರಿನಲ್ಲಿ ಒಂದು ಪಂದ್ಯ ಗೆದ್ದು ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಎರಡನೇ ಸೋಲಿನಲ್ಲಿ ಸ್ಟಾರ್​ ಬ್ಯಾಟ್ಸ್​​ಮನ್ಸ್​​ ವೈಫಲ್ಯ ತಂಡಕ್ಕೆ ತಲೆ ನೋವು ತಂದಿದೆ. ಆರಂಭಿಕರಾದ ಬ್ರೆಂಡನ್​ ಮೆಕಲಂ ಹಾಗೂ ಕ್ವಿಂಟನ್​ ಡಿಕಾಕ್​ ಉತ್ತಮ ಜೊತೆಯಾಟ ನೀಡುವ ಅನಿವಾರ್ತಯತೆ ಇದೆ. ಇನ್ನು ಕಳೆದೆರುಡು ಪಂದ್ಯಗಳಲ್ಲಿ ರನ್​ ಕಲೆ ಹಾಕುವಲ್ಲಿ ವಿಫಲರಾಗಿರುವ ಬ್ರೆಂಡನ್ ಮೆಕಲಂ ಫಾರ್ಮ್​​ ಮ್ಯಾನೆಜ್ಮೆಂಟ್​ಗೆ ದೊಡ್ಡ ಚಿಂತೆಯಾಗಿದೆ. ರಾಜಸ್ಥಾನ ವಿರುದ್ಧ ವಿರಾಟ್​, ವಿರಾ ವೇಶದ ಆಟ ಮುಂಬೈನಲ್ಲೂ ಮುಂದುವರೆಸುವ ಯೋಜನೆ ಹೆಣೆದುಕೊಂಡಿದ್ದಾರೆ. ಇನ್ನು ಆರೆಂಜ್​ ಕ್ಯಾಪ್​ ಮೇಲೆ ಕಣ್ಣಿಟ್ಟಿರುವ ಎಬಿಡಿ ಇಂದಿನ ಪಂದ್ಯದಲ್ಲಿ ತಮ್ಮ ಸಾಮರ್ಥಕ್ಕೆ ತಕ್ಕ ಆಟ ಆಡಿದಲ್ಲಿ, ಡಿವಿಲಿಯರ್ಸ್​​ ಮುಡಿಗೆ ಆರೆಂಜ್​ ಗರಿ ಸಲ್ಲಬಹುದು. ಮಧ್ಯಮ ಕ್ರಮಾಂಕದಲ್ಲಿ ಮಂ​​ದೀಪ್ ಸಿಂಗ್​ ಜವಬ್ದಾರಿಯುತ ಮುಂದುವರೆಸಬೇಕು. ರಾಯಲ್ಸ್​ ವಿರುದ್ಧ ಸ್ಫೋಟಕ ಆಟವಾಡಿದ ವಾಷಿಂಗ್ಟನ್ ಸುಂದರ್​ ಭರವಸೆ ಮೂಡಿಸಿದ್ದಾರೆ. ಐಪಿಎಲ್​ ಪ್ರಾರಂಭವಾದಗಿನಿಂದಲೂ ಆರ್​​ಸಬಿಯ ದೊಡ್ಡ ವೀಕ್ನೆಸ್​ ಅಂದ್ರೆ ಅದು ಬೌಲಿಂಗ್​. ಆದ್ರೆ ಈ ಬಾರಿ ತಂಡದಲ್ಲಿ ಉತ್ತಮ ಬೌಲರ್​ಗಳಿದ್ರು, ರನ್​ಗೆ ಕಡಿವಾಣ ಬೀಳತ್ತಿಲ್ಲ. ವೇಗಿ ಉಮೇಶ್​​ ಯಾದವ್​​ ಪಂಜಾಬ್ ವಿರುದ್ಧ ಮಿಂಚಿದ್ರೆ, ರಾಜಸ್ಥಾನ ವಿರುದ್ಧ ದುಬಾರಿಯಾದ್ರು. ಇನ್ನು, ಕ್ರಿಸ್​ ವೋಕ್ಸ್​​, ವಾಶಿಂಗ್ಟನ್​​ ಸುಂದರ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದ್ರೂ, ಯಥೇಚ್ಛವಾಗಿ ರನ್ ನೀಡ್ತಿದಾರೆ. ರನ್​​ಗಳಿಗೆ ಕಡಿವಾಣ ಹಾಕಿ, ವಿಕೆಟ್​ ಬೇಟೆ ನಡೆಸಬೇಕಿದೆ. ಅಲ್ಲದೆ ಮೊದಲ ಪಾವರ್​​ ಪ್ಲೇನ್​​ನಲ್ಲಿ ಶಿಸ್ತು ಬದ್ಧ ದಾಳಿ ನಿರ್ವಹಣೆ ಮಾಡಬೇಕು. ಇನ್ನು ಡೆತ್​ ಓವರ್​​ಗಳಲ್ಲಿ ವಿರಾಟ್​ ಪಡೆ ಇನ್ನು ಎಚ್ಚೆತ್ತುಕೊಳ್ಳಬೇಕಿದೆ.

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದ ಸೂರ್ಯಕುಮಾರ್​ ಯಾದವ್​ ಬೆಸ್ಟ್​ ಫರ್ಫಾಮೆನಸ್ಸ್​ ನೀಡಿದ್ದಾರೆ. ಇನ್ನು ಇವರಿಗೆ ವಿದೇಶಿ ಆಟಗಾರ ಇವೆನ್​ ಲಿವಿಸ್​​ ಉತ್ತಮ ಸಾಥ್​ ಕೊಟ್ಟಿದ್ದಾರೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್​ ಬ್ಯಾಟ್ಸ್​​ಮನ್​​ಗಳು ರನ್​ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡಕ್ಕೆ ತಲೆ ನೋವು ತಂದಿದೆ. ಯುವ ಆಟಗಾರ ಇಶಾನ್​ ಕಿಶಾನ್​​ ರನ್​ ಕಲೆ ಹಾಕುತ್ತಿರುವುದು ತಂಡಕ್ಕೆ ಪ್ಲಸ್​​ ಪಾಯಿಂಟ್​​. ಇನ್ನು ಕಳೆದ ಸೀಜನ್​​ಗಳಲ್ಲಿ ಡೆತ್ ಓವರ್​​ಗಳಿಗೆ ಹೆಸರು ವಾಸಿಯಾಗಿದ್ದ ತಂಡ, ಈ ಬಾರಿ ರನ್​​ಗಳನ್ನು ನೀಡಿ ಕೈ ಸುಟ್ಟುಕೊಳ್ಳುತ್ತಿದ್ದೆ. ಇನ್ನು ಜಸ್ಪ್ರಿತ್​ ಬೂಮ್ರಾ, ಮುಸ್ತಾಫಿಜರ್​ ರಹಮಾನ್​ ಶಿಸ್ತು ಬದ್ಧ ದಾಳಿ ನಡೆಬೇಕು. ಅಲ್ಲದೆ ಸ್ಪಿನ್​ ವಿಭಾಗದಲ್ಲಿ ಮಯಾಂಕ್​ ಮಾರ್ಕೆಂಡೆ ಹಾಗೂ ಕೃನಾಲ್​ ಪಾಂಡ್ಯ ಜಾದು ನಡೆಸಬೇಕಿದೆ. ಇಂದಿನ ಪಂದ್ಯದಲ್ಲಿ ದಕ್ಷಿಣ ಭಾರತದ ಎರಡು ಪ್ರಮುಖ ತಂಡಗಳು ಪೈಪೋಟಿ ನಡೆಸುತ್ತಿರುವುದು ಅಭಿಮಾನಿಗಳಿಗೆ ರೋಚಕತೆ ಹುಟ್ಟಿಸಿದೆ.
ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *