ಆಸೀಸ್ ವಿರುದ್ಧ ಆರ್​ಸಿಬಿ ಬಾಯ್ಸ್ ದರ್ಬಾರ್..!

ಟೀಮ್ ಇಂಡಿಯಾದಲ್ಲಿ ಇದೀಗ ಹೊಸ ಖೋಟಾವೊಂದು ಶುರುವಾಗಿದೆ. ಅದ್ರಲ್ಲಿ ಆಟಗಾರರಿಗೆ ಅಳೆದು ತೂಗಿ ಆಯ್ಕೆ ಮಾಡಲಾಗುತ್ತೆ. ಈ ಹಿಂದೆ ಮಾಜಿ ನಾಯಕ ಧೋನಿ ನಾಯಕತ್ವದಲ್ಲಿದ್ದಾಗ ಒಂದು ಖೋಟಾ ಇತ್ತು. ಕ್ರಿಕೆಟ್ ಅನ್ನೋ ಜಂಟಲ್​ಮೆನ್​ ಗೇಮ್​ನಲ್ಲಿ ಟೀಮ್ ಇಂಡಿಯಾ ಸಖತ್ ಶೈನ್ ಆಗ್ತಿದೆ. ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಟೀಮ್ ಇಂಡಿಯಾ ಇದೀಗ, ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಯನ್ನಾಡೋಕೆ ಸಜ್ಜಾಗಿದೆ. ಆದ್ರೆ, ಇದ್ರ ನಡುವೆ, ಕೊಹ್ಲಿ ಬಾಯ್ಸ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್ ಕಾಲದಿಂದ ಹಿಡಿದು ಸೌರವ್ ಗಂಗೂಲಿ ತನಕ ಟೀಮ್ ಇಂಡಿಯಾದಲ್ಲಿ ಪ್ರತಿಭಾವಂತರಿಗೆ ಮೊದಲು ಅವಕಾಶ ಸಿಗ್ತಿತ್ತು. ಅಲ್ದೇ, ಇಲ್ಲಿ ಯಾವುದೇ ರೀತಿಯ ಪಾರ್ಶಲಿಟಿ ನಡೆಯುತ್ತಿರಲಿಲ್ಲ. ಆದ್ರೆ, ಮಹೇಂದ್ರ ಸಿಂಗ್ ಧೋನಿ ಬಂದ ಮೇಲೆ, ಹೊಸ ಹುಡುಗರಿಗೆ ಮಾಹಿ ಹೆಚ್ಚು ಅವಕಾಶ ನೀಡಿದ್ರು. ಅಲ್ದೇ, ಅವರನ್ನ ಟ್ರೈನಪ್ ಮಾಡಿದ್ರು. ಬರು-ಬರುತ್ತಾ ಟೀಮ್ ಇಂಡಿಯಾದಲ್ಲಿ ಧೋನಿ ಬಾಯ್ಸ್​ ಹೆಚ್ಚಾಗೇ ಕಾಣ್ತಾ ಬಂದ್ರು.ಇದು ಎಷ್ಟರ ಮಟ್ಟಿಗೆ ಅಂದ್ರೆ, ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ತಂಡದಲ್ಲಿ ಪ್ರತಿನಿಧಿಸೋ ಹಲವು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಖಾಯಂ ಪ್ಲೇಯರ್​ಗಳಾಗಿರುತ್ತಿದ್ರು. ಕ್ರಮೇಣ ಇದನ್ನ ಅಭಿಮಾನಿಗಳೂ ಸಿಎಸ್​ಕೆ ಕೋಟಾ ಅಂತಾನೆ ಕರೆಯುತ್ತಿದ್ರು. ಚೆನೈ ಸೂಪರ್ ಕಿಂಗ್ಸ್​ನಲ್ಲಿ ಆಡ್ತಿದ್ದ ನಾಲ್ವರು ಆಟಗಾರರು ತಂಡದಲ್ಲಿ ಖಾಯಂ ಆಟಗಾರರಾಗಿದ್ರು.

ಆದ್ರೀಗ ವಿರಾಟ್ ಪರ್ವ ಶುರುವಾದ ಮೇಲೆ, ಕೇಳೆಬೇಕಾ, ಟೀಮ್ ಇಂಡಿಯಾದಲ್ಲಿ ಹೊಸ ಖೋಟಾವೊಂದು ಹುಟ್ಟಿಕೊಂಡಿದೆ. ಅದೇ ಆರ್​ಸಿಬಿ ಖೋಟಾ ಅಂತಾ. ಇದನ್ನ ನಾವ್ ಹೇಳ್ತಿರೋದು ಅಲ್ಲ, ಬದಲಿಗೆ ಕ್ರಿಕೆಟ್ ಅಭಿಮಾನಿಗಳು ಹೇಳ್ತಿರೋದು. ಮೊನ್ನೆ ತಾನೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನ ಆಯ್ಕೆ ಸಮಿತಿ ಪ್ರಕಟಿಸಿತ್ತು. ತಂಡದಲ್ಲಿ 16 ಆಟಗಾರರಿಗೆ ಅವಕಾಶ ನೀಡಿದ್ದು, ಇದ್ರಲ್ಲಿ ಐಪಿಎಲ್​ನಲ್ಲಿ ಒಂದೇ ತಂಡದಲ್ಲಿ ಆಡೋ ನಾಲ್ವರು ಆಟಗಾರರಿಗೆ ಸ್ಥಾನ ಸಿಕ್ಕಿದೆ. ಹೀಗಾಗಿ ಅಭಿಮಾನಿಗಳು ಇದನ್ನ ಆರ್​ಸಿಬಿ ಖೋಟಾ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುಭವಿ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾರನ್ನ ಕೈಬಿಟ್ಟಿದ್ದಕ್ಕೆ ಈ ರೀತಿ ಅಭಿಪ್ರಾಯಗಳು ವ್ಯಕ್ತವಾಗಿದೆ.ಅದೇನೇ ಇರಲಿ, ಅಭಿಮಾನಿಗಳು ಹೇಳೋ ಪ್ರಕಾರ ಅದು ಕೂಡ ನಿಜ. ತಂಡದಲ್ಲಿ ಆರ್​ಸಿಬಿಯಲ್ಲಿ ಆಡ್ತಿರೋ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ, ಕೇದಾರ್ ಜಾಧವ್, ಕೆ.ಎಲ್.ರಾಹುಲ್, ಯಜುವೇಂದರ್ ಚಹಾಲ್ ಆಸೀಸ್ ವಿರುದ್ಧ ಆಡೋ ಅವಕಾಶವನ್ನ ಪಡೆದಿದ್ದಾರೆ. ಒಟ್ನಲ್ಲಿ ಯುವಿ-ರೈನಾ ಕೈಬಿಟ್ಟಿದಕ್ಕಂತೂ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ….
ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *