ಯಮುನಾ ನದಿ ಪಾತ್ರ ಹಾಳು ಮಾಡುವುದರಲ್ಲಿ ಆರ್ಟ್ ಆಫ್ ಲಿವಿಂಗ್ ಪಾತ್ರ: ಎನ್​​ಜಿಟಿ

ನವದೆಹಲಿ: ಯಮುನಾ ನದಿಯ ಪರಿಸರವನ್ನು ಹಾಳು ಮಾಡಲು ಆರ್ಟ್ ಆಫ್ ಲಿವಿಂಗ್​​ನ ಮುಖ್ಯಸ್ಥ ರವಿಶಂಕರ್ ಅವರೇ ಕಾರಣ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಭಿಪ್ರಾಯಪಟ್ಟಿದೆ. ಅಲ್ಲದೇ, ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನದಿಪಾತ್ರದ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ. ಜೊತೆಗೆ ಆರ್ಟ್​ ಆಫ್ ಲಿವಿಂಗ್​​ಗೆ ಹೆಚ್ಚುವರಿಯಾಗಿ ಯಾವುದೇ ದಂಡವನ್ನು ವಿಧಿಸದಿರಲು ನಿರ್ಧಿರಿಸಿದೆ. ನ್ಯಾ. ಸ್ವಂತತ್ರ ಕುಮಾರ್ ನೇತೃತ್ವದ ಎನ್​​ಜಿಟಿ ನ್ಯಾಯಪೀಠ, ಈ ಹಿಂದೆ ವಿಧಿಸಿದ್ದ ದಂಡದ ಬಾಕಿ ಮೊತ್ತವನ್ನು ಪಾವತಿಸುವಂತೆ ಆರ್ಟ್​ ಆಫ್ ಲಿವಿಂಗ್​ಗೆ ಸೂಚಿಸಿದೆ. ಕಳೆದ ವರ್ಷ ಎನ್​​ಜಿಟಿ ನದಿಪಾತ್ರವನ್ನು ಹಾಳು ಮಾಡಿದ್ದಕ್ಕಾಗಿ ಮಧ್ಯಂತರವಾಗಿ 5 ಕೋಟಿ ರೂ. ಪರಿಹಾರವನ್ನು ನೀಡುವಂತೆ ನಿರ್ದೇಶಿಸಿತ್ತು. ಆದರೆ, ದಂಡ ಪಾವತಿಸುವುದಿಲ್ಲ ಎಂದು ರವಿಶಂಕರ್ ತಕರಾರು ತೆಗೆದಿದ್ದರು.

0

Leave a Reply

Your email address will not be published. Required fields are marked *