ರಾಷ್ಟ್ರದ ಹಿತಾಸಕ್ತಿಯಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ: ರಾಜನಾಥ್ ಸಿಂಗ್

ನವದೆಹಲಿ: ರಾಷ್ಟ್ರದ ಹಿತಾಸಕ್ತಿಯಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬಿಎಸ್​ಎಫ್​ ದೀಕ್ಷಾದಿನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಕಳೆದ ಕೆಲವು ತಿಂಗಳುಗಳಿಂದ ಪಾಕ್​ ಪ್ರೇರಿತ ಭಯೋತ್ಪಾದನೆ, ಅಕ್ರಮ ನುಸುಳುವಿಕೆ ತಡೆಯುವಲ್ಲಿ ಸೇನೆ ವಹಿಸಿದ ಪಾತ್ರವನ್ನು ಅವರು ಪ್ರಶಂಸಿಸಿದರು. ಸೇನೆ ಪಾಕ್ ವಿರುದ್ಧ ನಡೆಸಿದ ನಿರ್ದಿಷ್ಟ ದಾಳಿಯಿಂದಾಗಿ ದಾಳಿಗಳು ಗಣನೀಯ ಪ್ರಮಾಣದಲ್ಲಿ ನಿಯಂತ್ರಣವಾಗಿದೆ ಎಂದರು. ಅಲ್ಲದೇ. ಸೇನೆಯ ಕಾರ್ಯವನ್ನು ಪ್ರಶಂಸಿಸುವುದು ಕೇವಲ ಜವಾಬ್ದಾರಿಯಲ್ಲ. ಅದು ದೇಶದ ಏಕತೆಯನ್ನು ರಕ್ಷಿಸುವ ಕೆಲಸ ಎಂದು ಕೂಡ ಅವರು ಅಭಿಪ್ರಾಯಪಟ್ಟರು.

0

Leave a Reply

Your email address will not be published. Required fields are marked *