ಏಲಕ್ಕಿ ನಾಡಲ್ಲಿ ಮುಂದುವರಿದ ಮಳೆರಾಯನ ಮುನಿಸು..

ಒಲ್ಲದ ಮನಸ್ಸಿನಿಂದಲೇ ಅನ್ನದಾತ ತನ್ನ ಒಡನಾಡಿಗಳನ್ನು ಕಂಡವರ ಪಾಲು ಮಾಡ್ತಿದ್ದಾನೆ. ಕುಟುಂಬ ನಿರ್ವಹಣೆ ಕಷ್ಟವಾಗಿ ತಾನು ಸಾಕಿದ್ದ ಜಾನುವಾರುಗಳನ್ನ ಮಾರಾಟ ಮಾಡ್ತಿದ್ದಾನೆ.ಹಾವೇರಿ ಜಿಲ್ಲೆಯ ರೈತರ ಮೇಲೆ ಮಳೆರಾಯ, ಈ ವರ್ಷವೂ ಮುನಿಸಿಕೊಂಡಿದ್ದಾನೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಗೋವಿನಜೋಳ, ಹತ್ತಿ, ಭತ್ತ, ಶೇಂಗಾ, ಹೆಸರು ಸೇರಿದಂತೆ ಎಲ್ಲಾ ಬೆಳೆಗಳಿಗೆ ಮಳೆ ಕೊರತೆ ಎದುರಾಗಿದ್ದು ಒಣಗಿವೆ. ಸಾಲ-ಸೋಲ ಮಾಡಿ ಬಿತ್ತಿದ ಬೆಳೆ ಕೈ ಸೇರುವ ಭರವಸೆ ಹುಸಿಯಾದ ಹಿನ್ನೆಲೆ ರೈತರು ಗುಳೆ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಮಕ್ಕಳಂತೆ ಸಾಕಿದ ಎತ್ತುಗಳನ್ನು ಮಾರಲು ಮುಂದಾಗಿದ್ದಾರೆ.

ಮುಂಗಾರು ಆರಂಭದಲ್ಲಿ ಮಳೆಯ ಆರ್ಭಟ ನೋಡಿ ರೈತರು ಈ ಬಾರಿ ಉತ್ತಮ ಮಳೆಯಾಗುತ್ತೆಂದು ಬಡ್ಡಿಗೆ ಸಾಲ ಪಡೆದು ಬೀಜ ಬಿತ್ತನೆ ಮಾಡಿದ್ರು. ಆದ್ರೆ ಮಳೆ ಇಲ್ಲದೇ ಬಿತ್ತಿದ ಬೀಜ ಮೊಳಕೆಯಲ್ಲೇ ಕಮರಿ ಹೋಗಿದೆ. ಹೀಗಾಗಿ ಜಾನುವಾರುಗಳನ್ನ ಮಾರಿಯಾದ್ರು ಸಾಲ ತೀರಿಸಲು ರೈತರು ಮುಂದಾಗಿದ್ದಾರೆ. ಆದ್ರೆ ಮಾರುಕಟ್ಟೆಯಲ್ಲಿ ಜಾನುವಾರು ಬೆಲೆ ಕುಸಿದಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಲ್ಲಾಳಿಗಳು 80ರಿಂದ 1 ಲಕ್ಷ ಬೆಲೆ ಬಾಳುವ ಜೋಡಿ ಎತ್ತನ್ನು 35 ರಿಂದ 40 ಸಾವಿರಕ್ಕೆ ಕೇಳುತ್ತಿದ್ದಾರಂತೆ.ಹೀಗೆ ಹತ್ತಾರು ಸಮಸ್ಯೆಗೆ ಸಿಕ್ಕ ರೈತರು ಮುಂದೇನು ಮಾಡೋದು ಎಂದು ತಿಳಿಯದೇ, ತಮ್ಮ ಒಡನಾಡಿಗಳನ್ನ ಮಾರಾಟ ಮಾಡ್ತಿದ್ದಾರೆ.. ಮಳೆರಾಯನಿಗೆ ಶಾಪ ಹಾಕುತ್ತಾ ಕೆಲಸ ಅರಸಿ ಗುಳೆ ಹೊರಡಲು ಅಣಿಯಾಗಿದ್ದಾರೆ.

ಅಣ್ಣಪ್ಪ ಬಾರ್ಕಿ ಸುದ್ದಿಟಿವಿ ಹಾವೇರಿ

0

Leave a Reply

Your email address will not be published. Required fields are marked *